Breaking
23 Mar 2026, Mon

ಹಿರಿಯ ತುಳು ಹಾಗೂ ಕನ್ನಡ ಸಾಹಿತಿ ಆರ್. ಲಲಿತಾ ರೈ ಇನ್ನಿಲ್ಲ

ಮಂಗಳೂರು: ಹಿರಿಯ ತುಳು ಮತ್ತು ಕನ್ನಡ ಸಾಹಿತಿ ಆರ್. ಲಲಿತಾ ರೈ (97) ನಿಧನರಾಗಿದ್ದಾರೆ.

ಬರಹಗಾರ್ತಿಯಾಗಿ ಲಲಿತಾ ರೈ ಅವರ ನಿಯತಕಾಲಿಕಗಳಲ್ಲಿ ನೂರಾರು ಬರಹಗಳನ್ನು ಪ್ರಕಟಿಸಿದ್ದು ಚಿತ್ತಗಾಂಗಿನ ಕ್ರಾಂತಿವೀರರ , ಕನ್ನಡ ಸಣ್ಣ ಕತೆಗಳ ಸಂಕಲನ , ಮತ್ತೆ ಬೆಳಗಿತು , ಸೊಡರು ಮತ್ತು ಇತರ ಕಥೆಗಳು, ಇಂಟರ್‌ನೆಟ್‌ನ ಒಳಗೆ ಮತ್ತು ಇತರ ಕತೆಗಳು, ತುಳು ಸಣ್ಣಕತೆಗಳ ಸಂಕಲನ-1 ಹಾಗೂ ದೇಸಾಂತರ, ಬೋಂಟೆ ದೇರೆಂಡ್ ಅವರ ಪ್ರಮುಖ ತುಳು ಕಾದಂಬರಿಗಳು.

ಇವರ ಇಂಟರ್‌ನೆಟ್‌ನ ಒಳಗೆ ಮತ್ತು ಇತರ ಕಥೆಗಳು ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ತ್ರಿವೇಣಿ ಪುರಸ್ಕಾರ, ನಿರತ ಸಾಹಿತ್ಯ ಸಂಪದ ಸಂಸ್ಥೆಯಿಂದ ಓಟು ಯಾರಿಗೆ ಕೃತಿಗೆ ಮೊದಲ ಬಹುಮಾನ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವೀರರಾಣಿ ಅಬ್ಬಕ್ಕ ಪ್ರಶಸ್ತಿ ಮುಂತಾದ ಹಲವು ಗೌರವಗಳು ಸಂದಿವೆ.

Leave a Reply

Your email address will not be published. Required fields are marked *