Breaking
23 Mar 2026, Mon

ಕಾಪು ಬೀಚ್ ನಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ

ಉಡುಪಿ: ಬಾಲಕನೊಬ್ಬನಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ ಘಟನೆ ಉಡುಪಿಯ ಕಾಪು ಬೀಚ್ ನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಶೌಕತ್ ಅಲಿ (47) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಕುಟುಂಬವೊಂದು ತಿರುಗಾಡಲು ಕಾಪು ಬೀಚ್ ಗೆ ಬಂದಿದ್ದಾರೆ. ಈ ವೇಳೆ ಶೌಚಾಲಯದ ಬಳಿ ಆ ಕುಟುಂಬದ ಬಾಲಕನೊಬ್ಬನನ್ನು ಶೌಕತ್ ಅಲಿ ಚುಂಬಿಸಿ ಕಿರುಕುಳ ನೀಡಲಯ ಯತ್ನಿಸಿದ್ದಾನೆ ಎನ್ನಲಾಗಿದೆ. ಇದನ್ನು ನೋಡಿ ಬಾಲಕನ ತಂದೆ ಬೊಬ್ಬೆ ಹಾಕಿದ್ದು, ಆಗ ಆರೋಪಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ. ಆದರೆ ಈ ವೇಳೆ ಗಸ್ತು ನಿರತ ಪೊಲೀಸರು, ಸಾರ್ವಜನಿಕರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿಯಲ್ಲಿ ಕಾಪು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *