Breaking
10 May 2026, Sun

ಮಂಗಳೂರಿನಲ್ಲಿ ಮುಸ್ಲಿಂ ಟ್ಯಾಕ್ಸಿ ಚಾಲಕನಿಗೆ ಟೆರರಿಸ್ಟ್ ಎಂದು ನಿಂದನೆ ಆರೋಪ: ಮೂವರ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಚಾಲಕನಿಗೆ ಮುಸ್ಲಿಂ ಟೆರರಿಸ್ಟ್ ಎಂದು ಹೇಳಿ ನಿಂದನೆ ಮಾಡಿರುವ ಆರೋಪದ ಮೇಲೆ ಮಂಗಳೂರಿನಲ್ಲಿ ಉರ್ವಾ ಪೊಲೀಸ್ ಠಾಣೆಯಲ್ಲಿ ಮೂವರು ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ.

ವಿಮಲ್, ಸಂತೋಷ್ ಮತ್ತು ಇನ್ನೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಓಲಾ ಮತ್ತು ರಾಪಿಡೋ ಆ್ಯಪ್ ನಲ್ಲಿ ಟ್ಯಾಕ್ಸಿ ಬುಕ್ ಮಾಡಿಸಿ, ಕರೆ ಮಾಡಿದ ಈ ಮೂವರು ವ್ಯಕ್ತಿಗಳು ಚಾಲಕ ಅಹ್ಮದ್ ಶಫೀಕ್ ಗೆ ಮುಸ್ಲಿಂ ಟೆರರಿಸ್ಟ್ ಎಂದು ಹೇಳಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಚಾಲಕನ ಮಾಹಿತಿ ಪ್ರಕಾರ ಮಲಯಾಳಂ ಸಿನಿಮಾ ನಟರಾದ ಜಯಕೃಷ್ಣನ್ ಮತ್ತು ವಿಮಲ್ ಈ ರೀತಿ ಮಾಡಿದ್ದಾರೆಂದು ಆರೋಪಗಳಿವೆ. ಎಫ್‌ಐಆರ್ ಪ್ರತಿಯಲ್ಲಿ ಜಯಕೃಷ್ಣನ್ ಹೆಸರಿಲ್ಲ. ಆ ಬಳಿಕ ಸ್ನೇಹಿತರ ಮೂಲಕ ಇವರಿದ್ದ ಜಾಗವನ್ನು ಟ್ಯಾಕ್ಸಿಯವರು ಪತ್ತೆ ಮಾಡಿದ್ದಾರೆ.

ಈ ವೇಳೆ, ಬಿಜೈ ನ್ಯೂರೋಡ್ ಬಳಿ ಕೇರಳ ನೋಂದಣಿಯ ಸ್ಕಾರ್ಪಿಯೋ ಕಾರಿನಲ್ಲಿ ಕುಳಿತು ಮದ್ಯದ ನಶೆಯಲ್ಲಿ ಇವರು ಓಲಾ ಬುಕ್ ಮಾಡಿದ್ದಾರೆ. ಬೇರೆ ಬೇರೆ ಕಡೆ ಲೊಕೇಶನ್ ಹಾಕಿ ದಾರಿ ತಪ್ಪಿಸುವಂತೆ ವರ್ತಿಸಿದ್ದಾರೆ. ಅಲ್ಲದೆ, ಟೆರರಿಸ್ಟ್ ಎಂದು ಹೇಳಿ ನಿಂದಿಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅಹ್ಮದ್ ಶಫೀಕ್ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *