Breaking
23 Mar 2026, Mon

ಉಜಿರೆಯ ಅರಳಿ ಬಳಿಯ ಮನೆಯಲ್ಲಿ ಕಳ್ಳತನ,ನಗ -ನಗದು ದೋಚಿ ಕಳ್ಳರು ಪರಾರಿ

ಉಜಿರೆ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ನಗ -ನಗದು ದೋಚಿ ಪರಾರಿಯಾದ ಘಟನೆ ಅ.9 ರಂದು ಉಜಿರೆಯ ಅರಳಿ ಬಳಿ ನಡೆದಿದೆ.

ಬೆಟ್ಟು ಮನೆಯ ಅರಳಿ ನಿವಾಸಿ ಮಹಾಬಲ ಎಂಬವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದೆ.

ಮಹಾಬಲ ಅವರು ಬೆಳಗ್ಗೆ ಎಂದಿನಂತೆ ಕೆಲಸ ಹೋಗಿದ್ದಾರೆ. ಈ ವೇಳೆ ಕಳ್ಳರು ಮನೆಯ ಪಕ್ಕಾಸು ತೆಗೆದು ಮನೆಯ ಒಳನುಗ್ಗಿ ಕಪಾಟಿನಲ್ಲಿದ್ದ ರೂ. 10, 000 ನಗದು ಹಾಗೂ 50ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *