ಕಾಸರಗೋಡು: ತಲೆ ತುಂಡರಿಸಲ್ಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಕುಂಬಳೆ ರೈಲು ಹಳಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ಪೆರ್ಲ ಕಾಟುಕುಕ್ಕೆ ಸೂರ್ಡೆಲು ನಿವಾಸಿ ಆಟೋ ಚಾಲಕ ತಾರಾನಾಥ ರೈ (46) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಕುಂಬಳೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹದಲ್ಲಿದ್ದ ಎಟಿಎಂ ಕಾರ್ಡ್ ನ ನೆರವಿನಿಂದ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ.





