Breaking
23 Dec 2024, Mon

ಶಿವಶಕ್ತಿ ಟ್ರೋಫಿ-2024 ವಾಲಿಬಾಲ್ ಪಂದ್ಯಾಟ ಉದ್ಘಾಟನೆ

ಪೂಂಜಾಲಕಟ್ಟೆ: ಶಿವಶಕ್ತಿ ಫ್ರೆಂಡ್ಸ್ ಕಜೆಕಾರು ಆಶ್ರಯಯದಲ್ಲಿ ನಡೆಯುವ ಪ್ರಥಮ ವರ್ಷದ ವಾಲಿಬಾಲ್ ಪಂದ್ಯಾಟ “ಶಿವಶಕ್ತಿ ಟ್ರೋಫಿ-2024” ರ ಉದ್ಘಾಟನಾ ಸಮಾರಂಭವು ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಪಂದ್ಯಾಟವನ್ನು ಶ್ರೀ ಮಹಾದೇವದೇವೇಶ್ವರ ದೇವಸ್ಥಾನದ ಅಧ್ಯಕ್ಷರಾದ ಗುಣಶೇಖರ ಕೊಡಂಗೆ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಕಜೆಕಾರ್ ಗ್ರಾಮಪಂಚಾಯತ್ ಅಧ್ಯಕ್ಷ ದೇವದಾಸ್ ಅಬುರ, ಪ್ರವೀಣ್ ಅಬುರ, ವಾಸುದೇವ ಭಟ್, ಯಶೋಧರ್ ಕಜೆಕಾರ್, ನಾರಾಯಣ ಮಾಸ್ಟರ್, ವಿನುತ್ ಮಾನ್ಯ, ಹೇಮಂತ್ ನಿರಾರಿ, ಹೇಮಂತ್ ಮಲ್ಲಡ್ಕ ಉಪಸ್ಥಿತರಿದ್ದರು.

ಪ್ರಕಾಶ್ ಕರ್ಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *