Breaking
22 Mar 2026, Sun

ಸಿದ್ದಕಟ್ಟೆಯಲ್ಲಿ ಅ.12ರಂದು ರೋಟರಿ ಕ್ಲಬ್‌ಗಳ ಆಶ್ರಯದಲ್ಲಿ 2ನೇ ವರ್ಷದ ರೋಟರಿ ಕಂಬಳ – ರೊ. ಎಲಿಯಾಸ್ ಸಾಂಕ್ಟಿಸ್ ಮಾಹಿತಿ

ಮಂಗಳೂರು: ರೋಟರಿ ಕ್ಲಬ್ ಬಂಟ್ವಾಳ ಲೊರೊಟೊ ಹಿಲ್ಸ್, ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ, ರೋಟರಿ ಕ್ಲಬ್ ಮೊಡಂಕಾಪು ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಆಶ್ರಯದಲ್ಲಿ, ವೀರ ವಿಕ್ರಮ ಜೋಡುಕೆರೆ ಕಂಬಳ ಸಮಿತಿ ಸಿದ್ದಕಟ್ಟೆ ಕೊಡಂಗೆ ಸಹಯೋಗದಲ್ಲಿ ಅಕ್ಟೋಬರ್ 12ರಂದು ಬಂಟ್ವಾಳದ ಕೊಡಂಗೆ ಸಿದ್ದಕಟ್ಟೆಯಲ್ಲಿ 2ನೇ ವರ್ಷದ ರೋಟರಿ ಕಂಬಳ ನಡೆಯಲಿದೆ ಎಂದು ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ, ಕಂಬಳದ ನೇತೃತ್ವ ವಹಿಸಿರುವ ರೊ. ಎಲಿಯಾಸ್ ಸಾಂಕ್ಟಿಸ್ ಹೇಳಿದ್ದಾರೆ.

ಮಂಗಳೂರಿನ ಸುದ್ದಿಗೋಷ್ಠಿ ಈ ಕುರಿತು ಮಾಹಿತಿ ನೀಡಿದ ಅವರು ಕಂಬಳದಲ್ಲಿ ಸುಮಾರು 170 ತಂಡಗಳು ಭಾಗವಹಿಸುವ ನಿರೀಕ್ಷೆಯಾಗಿದೆ.

ಈ ಕಂಬಳದಲ್ಲಿ ಜ್ಯೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗಗಳಲ್ಲಿ ಹಗ್ಗ ಕೋಣ ಸ್ಪರ್ಧೆಗಳು ನಡೆಯುತ್ತವೆ. ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಹೆಚ್ಚು ಬೆಲೆ ಪಡೆದು ಮಾರಾಟವಾಗುವ ಅವಕಾಶ ದೊರೆಯುತ್ತದೆ, ಇದರಿಂದ ರೈತರಿಗೆ ಲಾಭವಾಗುವ ನಿರೀಕ್ಷೆಯಿದೆ. ಕಂಬಳವು ಗ್ರಾಮೀಣ ಜನರಿಗೆ ಸಂಸ್ಕೃತಿ, ಐತಿಹಾಸ ಮತ್ತು ಕ್ರೀಡಾ ಸಂತೋಷವನ್ನು ನೀಡುವ ಒಂದು ಮಹತ್ವದ ಕಾರ್ಯಕ್ರಮವಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ರೊ. ಪದ್ಮರಾಜ್ ಬಲ್ಲಾಳ ಅವರು ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನ್ಯಾಕ್ ಉಳಪಾಡಿಗುತ್ತು ವಹಿಸಲಿದ್ದಾರೆ. ರೋಟರಿ ಜಿಲ್ಲಾ ಗವರ್ನರ್ ರೊ. ರಾಮಕೃಷ್ಣ ಪಿ.ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಹಲವು ರೋಟರಿ ಜಿಲ್ಲಾ ಗಣ್ಯರು ಹಾಗೂ ಸಮಾಜ ಸೇವಕರೂ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ರೊ. ಅವಿಲ್ ಮಿನೆಜಸ್, ರೊ ವಿಜಯ ಪೆರ್ನಾಂಡಿಸ್, ರೊ ಬಸ್ತಿ ಮಾಧವ ಶೆಣೈ, ರೊ ದುರ್ಗಾದಾಸ್ ಶೆಟ್ಟಿ, ರೊ ಪ್ರೀಮಾ ವೈಲೆಟ್ ಪೆರ್ನಾಂಡಿಸ್, ರೊ ಭಾಸ್ಕರ್ ರೈ ಕಟ್ಟ, ರೊ ಸುರೇಶ್ ಶೆಟ್ಟಿ, ರೊ ಪದ್ಮರಾಜ್ ಬಲ್ಲಾಳ, ರೊ ಮೋಹನ್ ಕೆ ಶ್ರಿಯಾನ್, ರೊ ಶಶಿಧರ್ ಶೆಟ್ಟಿ ಕಲ್ಲಾಪು, ರೊ ಮೊಹಮ್ಮದ್ ಯಾಸಿರ್, ರೋ ಕೆ. ನಾರಾಯಣ ಹೆಗ್ಡೆ, ರೋ ರಾಜ್ ಗೋಪಾಲ್ ರೈ, ರೋ ರಾಘವೇಂದ್ರ ಭಟ್, ರೋ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *