ಕೇರಳ : ಅಪರೂಪಕ್ಕೆ ಲಾಟರಿ ಖರೀದಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ 25 ಕೋಟಿ ಬಂಪರ್ ಬಹುಮಾನ ಒಲಿದು ಬಂದಿದೆ. ಕೇರಳ ರಾಜ್ಯದ ತಿರುವೋಣಂ ಬಂಪರ್ ಲಾಟರಿಯಲ್ಲಿ ಆಲಪ್ಪುಳ ಜಿಲ್ಲೆಯ ಥೈಕಟ್ಟುಶ್ಶೇರಿ ನಿವಾಸಿ ಶರತ್ ನಾಯರ್ ಎಂಬವರು 25 ಕೋಟಿ ಬಹುಮಾನವನ್ನು ಪಡೆದುಕೊಂಡ ಅದೃಷ್ಟಶಾಲಿಯಾಗಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಮನೆಗೆ ಹೋಗಿ ಲಾಟರಿ ಟಿಕೆಟ್ ಪರಿಶೀಲಿಸಿದಾಗ ಬಂಪರ್ ಬಹುಮಾನ ಗೆದ್ದಿರುವ ಬಗ್ಗೆ ಖಚಿತವಾಯಿತು ಎಂದು ಹೇಳಿದ್ದಾರೆ.

ನಾನು ಅಪರೂಪಕ್ಕೆ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತೇನೆ. ಬಂಪರ್ ಟಿಕೆಟ್ ಖರೀದಿಸಿದ್ದು ಇದೇ ಮೊದಲು. ಕಳೆದ 12 ವರ್ಷಗಳಿಂದ ಪೇಂಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅದೇ ಕೆಲಸದಲ್ಲಿ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ.



