ಕಾರ್ಕಳ: ಕಳೆದು ಹೋದ ಚಿನ್ನವನ್ನು ಕಸ ವಿಲೇವಾರಿ ಸಿಬ್ಬಂದಿಗಳು ಮರಳಿ ವಾರಸುದಾರರಿಗೆ ಒಪ್ಪಿಸಿ ಮಾನವೀಯತೆ ಮೆರೆದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.


ಕೆಲವು ದಿನಗಳ ಹಿಂದೆ ಶಿರ್ಲಾಲು ಗ್ರಾಮದ ಕಲಾಯಿ ಮನೆಯ ನಿವಾಸಿಯಾಗಿರುವ ಸುಬ್ಬಯ್ಯ ಶೆಟ್ಟಿ ಎಂಬವರು ನಿಧನರಾಗಿದ್ದು ಅವರ ಮಾರು 1.5ಲಕ್ಷ ರೂ. ಮೌಲ್ಯದ ಚಿನ್ನದ ಉಂಗುರಗಳು ಕಳೆದು ಹೋಗಿದ್ದವು.

ಈ ಉಂಗುರಗಳು ಕಸ ವಿಲೇವಾರಿ ಸಂದರ್ಭದಲ್ಲಿ ಸಿಬ್ಬಂದಿಗಳಾದ ಜೀವಂಧರ್ ಮತ್ತು ಭೂಮಿಕಾ ಇವರಿಗೆ ಕೈಗೆ ಸಿಕ್ಕಿದೆ.
ಸದ್ಯ ಈ ಸಿಬ್ಬಂದಿಗಳು ಗ್ರಾಮ ಪಂಚಾಯತ್ ಮುಖಾಂತರ ಉಂಗುರಗಳನ್ನು ಮನೆಯವರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ



