Breaking
24 Mar 2026, Tue

ದೆಹಲಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ದೆಹಲಿ ಘಟಕದ ದಶಮ ಸಂಭ್ರಮ

ದೆಹಲಿ: ಯಕ್ಷಧ್ರುವ ಪಟ್ಲ ಫೌಂಡೇಶನ್ ನ ದೆಹಲಿ ಘಟಕದ ದಶಮ ಸಂಭ್ರಮ ದೆಹಲಿಯ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆಯಿತು.

ದೆಹಲಿಯ ಸಂಸದರಾದ ಭಾನ್ಸುರಿ ಸ್ವರಾಜ್ ಸಮಾರಂಭವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಕಾರ್ಯ ಯೋಜನೆಗಳನ್ನು ಮತ್ತು ಪಟ್ಲ ಸತೀಶ್ ಶೆಟ್ಟಿಯವರಿಗೆ ಕಲಾವಿದರ ಮೇಲಿರುವ ಕಾಳಜಿಯನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಪಟ್ಲ ಟ್ರಸ್ಟ್ ಫೌಂಡೇಶನ್‌ಗೆ ಪೂರ್ಣ ಪ್ರಮಾಣದ ಸಹಕಾರದ ಭರವಸೆಯನ್ನು ನೀಡಿದ್ದಾರೆ.

ಈ ಸಂದರ್ಭ ಪಾವಂಜೆ ಮೇಳದ ಖ್ಯಾತ ಕಲಾವಿದರಾದ ರಾಧಾಕೃಷ್ಣ ನಾವಡ ಅವರನ್ನು ದೆಹಲಿ ಘಟಕದ ಪರವಾಗಿ ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ತೆಂಕು ಬಡಗು ಕಲಾವಿದರಿಂದ ಕೀಚಕ ವಧೆ ಯಕ್ಷಗಾನ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಪಟ್ಲ ಫೌಂಡೇಶನ್ ನ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳಾದ ಪ್ರದೀಪ ಆಳ್ವ ಕದ್ರಿ, ರವಿಚಂದ್ರ ಶೆಟ್ಟಿ ಅಶೋಕನಗರ, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *