ಬಂಟ್ವಾಳ: ತಾಲೂಕಿನ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ಉತ್ಸವದ ಪ್ರಯುಕ್ತ ಅ.3 ರಂದು ವಿಶೇಷ ಪೂಜೆ ಮತ್ತು ರಂಗಪೂಜೆಯೊಂದಿಗೆ ಸಮಾಪನಗೊಂಡಿತು.
ಈ ನವರಾತ್ರಿ ಉತ್ಸವದಲ್ಲಿ ಊರವರು ಹಾಗೂ ಕುಟುಂಬದವರು ಶ್ರೀ ದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ನೃತ್ಯ ಭಜನೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.





