Breaking
19 Sep 2026, Sat

ಕಟೀಲಿನ ಅಜಾರಿನಲ್ಲಿ ಮೂರು ಕಾರುಗಳ ನಡುವೆ ಅಪಘಾತ, ಪ್ರಯಾಣಿಕರು ಪಾರು

ಕಟೀಲು: ಕಾರೊಂದು ಮೂರು ಕಾರುಗಳಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾದ ಘಟನೆ ಕಟೀಲು ಸಮೀಪದ ಅಜಾರಿನಲ್ಲಿ ನಡೆದಿದೆ.

ಕಿನ್ನಿಗೋಳಿ ಕಡೆಯಿಂದ ಕಟೀಲು ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕಾರು ಅಜಾರು ಜಂಕ್ಷನ್ ಬಳಿ ತಲುಪಿದಾಗ ಚಾಲಕನು ಕಾರನ್ನು ನಿಯಂತ್ರಣಕ್ಕೆ ತರಲು ಬ್ರೇಕ್ ಬದಲು ಎಕ್ಸಲೇಟರ್ ತುಳಿದಿದ್ದಾನೆ. ಇದರಿಂದ ಕಾರಿನ ವೇಗ ಮತ್ತಷ್ಟು ಹೆಚ್ಚಾಗಿ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ.

ಬಳಿಕ ಡಿಕ್ಕಿಯ ರಭಸಕ್ಕೆ ಒಂದು ಕಾರು ಕಾರು ಸಮೀಪದ ತಗ್ಗು ಪ್ರದೇಶದಲ್ಲಿನ ಮನೆಯ ಮುಂಭಾಗಕ್ಕೆ ಹೋಗಿ ಬಿದ್ದಿದೆ. ಕಾರು ಮತ್ತೆ ಮುಂದುವರಿದು ಮುಂಭಾಗದಲ್ಲಿ ಬರುತ್ತಿದ್ದ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದು ಮತ್ತೆ ಮುಂದಕ್ಕೆ ನುಗ್ಗಿ ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಎಲ್ಲಾ ವಾಹನಗಳ ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *