Breaking
25 Sep 2026, Fri

ಉಡುಪಿ: ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ನವದುರ್ಗೆಯರ ಸಹಿತ ಶಾರದಾ ಮಾತೆ ವಿಗ್ರಹಗಳ ಜಲಸ್ತಂಭನದೊಂದಿಗೆ 10 ದಿನಗಳ ಕಾಲ ನಡೆದ ಉಡುಪಿ- ಉಚ್ಚಿಲ ದಸರಾ ಮಹೋತ್ಸವ ಸಂಪನ್ನಗೊಂಡಿದೆ.

ಚಂಡಿಕಾ ಯಾಗ ವಿಸರ್ಜನಾ ಶೋಭಾಯಾತ್ರೆಯ ಪ್ರಯುಕ್ತ ಬೆಳಗ್ಗಿನಿಂದಲೇ ಸಹಸ್ರಾರು ಮಂದಿ ಕ್ಷೇತ್ರಕ್ಕೆ ಬಂದಿದ್ದು ಬೆಳಿಗ್ಗೆ 10.30 ಕ್ಕೆ ಪಲ್ಲ ಪೂಜೆ ನೆರವೇರಿಸಿ 11 ರಿಂದಲೇ ಮಹಾ ಅನ್ನಸಂತರ್ಪಣೆ ಆರಂಭವಾಯಿತು. ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ಹಾಗೂ ಶಾರದಾ ಮಾತೆಗೆ ಮಹಾ ಮಂಗಳಾರತಿ ನಡೆಯಿತು.

ಕ್ಷೇತ್ರದ ಪ್ರಧಾನ ತಂತ್ರಿ ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ ಮತ್ತು ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಮಹಾಚಂಡಿಕಾಯಾಗ ನಡೆದು, ಸಹಸ್ರ ಸಂಖ್ಯೆಯಲ್ಲಿ ನಾರಿಕೇಳ, ನವಧಾನ್ಯ, ರವಕೆ ಕಣ, ರೇಷ್ಮೇ ಸೀರೆ, ಫಲವಸ್ತುಗಳನ್ನು ಸಮರ್ಪಿಸಿ ಪೂರ್ಣಾಹುತಿ ನೆರವೇರಿಸಲಾಯಿತು. ದಸರಾ ಪ್ರಯುಕ್ತ ನವದುರ್ಗೆಯರ ಸಹಿತ ಶಾರದಾ ವಿಗ್ರಹಗಳ ಶೋಭಾಯಾತ್ರೆ ನಡೆಯಿತು.

ಅಂಬಾರಿ ಹೊತ್ತ ಟ್ಯಾಬ್ಲೊ, ನವದುರ್ಗೆಯು ಮತ್ತು ಶಾರದಾ ಮಾತೆಯ ವಿಗ್ರಹಕ್ಕೆ ಡ್ರೋನ್ ಮೂಲಕ ನಡೆದ ಪುಷ್ಪಾರ್ಚನೆ ಸೇರಿದ ಭಕ್ತರಲ್ಲಿ ಕಣ್ಮನ ಸೆಳೆಯಿತು.

ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಶುದ್ದ ಕುಡಿಯುವ ನೀರಿನ ಪೊರೈಕೆಗಾಗಿ ನೀರು ಸರಬರಾಜು ವಾಹನ, ಶುಚಿತ್ವ ವಾಹನ, ಕುಡಿಯುವ ನೀರಿನ ವಾಹನ ಮತ್ತು ಮೆಟಲೈಟ್ ವಾಹನಗಳು ಮೆರವಣಿಗೆಗೆ ಸಾಥ್ ನೀಡಿದವು.

Leave a Reply

Your email address will not be published. Required fields are marked *