ಬೆಳ್ತಂಗಡಿ: ಹಾಸನ ಮೂಲದ 13 ವರ್ಷದ ಬಾಲಕನೊಬ್ಬ ಮನೆಯಿಂದ ತಪ್ಪಿಸಿಕೊಂಡು ಬಂದ ಘಟನೆ ಅ.2 ರಂದು ನಡೆದಿದೆ.
ತಪ್ಪಿಸಿಕೊಂಡ ಬಾಲಕನನ್ನು ಹಾಸನ ಮೂಲದ ಕೊಪ್ಪದ ನಿವಾಸಿ ಸಂಜಯ್ ಎಂದು ಗುರುತಿಸಲಾಗಿದೆ.

ಅ.2 ರಂದು ಹಾಸನದಿಂದ ತಪ್ಪಿಸಿಕೊಂಡು ಬಂದಿದ್ದು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ತಿರುಗಾಡುತ್ತಿದ್ದನು. ಇದನ್ನು ಗಮನಿಸಿದ ಬೆಳ್ತಂಗಡಿ ತಾಲೂಕಿನ ಕಡವಿನಬಾಗಿಲು ಅಂಗನವಾಡಿ ಶಿಕ್ಷಕಿ ರಾಜೀವಿ ಕೆ ಸಿ ಬೆಳ್ತಂಗಡಿ ತಾಲೂಕಿನ ಸ್ವತಂತ್ರ ಸಂಘ ದ ಅಧ್ಯಕ್ಷರು ಹಾಗೂ ಶಿಕ್ಷಕಿ ಯರಾದ ಶಶಿಪ್ರಭಾ, ಪದ್ಮಾವತಿ ಇವರು ಬಾಲಕನನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬಳಿಕ ಬಾಲಕನನ್ನು ಸುರಕ್ಷಿತವಾಗಿ ಮಂಗಳೂರು ಮಕ್ಕಳ ರಕ್ಷಣಾ ಘಟಕಕ್ಕೆ ಕಳುಹಿಸುವ ವ್ಯವಸ್ಥೆನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ.





