Breaking
21 Mar 2026, Sat

ಕುಂದಾಪುರದಲ್ಲಿ ಕಾರು ಬೈಕ್ ಅಪಘಾತ: ಸವಾರ ಆಸ್ಪತ್ರೆಗೆ ದಾಖಲು

ಕುಂದಾಪುರ: ಓಮಿನಿ ಕಾರೊಂದು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಹೊಳಗೆ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ರಸ್ತೆಯ ಸೇತುವೆ ಬಳಿ ಸೆ.30 ರಂದು ನಡೆದಿದೆ.

ವಿಕ್ರಮ್ ಶೇಟ್ ಎಂಬವರಿಗೆ ಸೇರಿದ ಕಾರು ಹಾನಿಗೆ ಈಡಾಗಿದೆ.

ವಿಕ್ರಮ್ ಶೇಟ್ ಅವರು ವಕ್ವಾಡಿಯಿಂದ ಕೋಟೇಶ್ವರದ ಕಡೆಗೆ ಓಮಿನಿ ಕಾರನ್ನು ಚಲಾಯಿಸಿಕೊಂಡು ಹೋಗುವಾಗ ವಕ್ವಾಡಿ ಸೇತುವೆ ಬಳಿ ಅಡ್ಡ ಬಂದ ಹಾವೊಂದನ್ನು ತಪ್ಪಿಸಲು ಹೋಗಿ ಎದುರುಗಡೆಯಿಂದ ಬೈಕ್ ನಲ್ಲಿ ಬರುತ್ತಿದ್ದ ಕೃಷ್ಣ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಹೊಳೆಗೆ ಬಿದ್ದಿದ್ದಾರೆ.

ಕೂಡಲೇ ಕಾರಿನ ಡ್ರೈವರ್ ವಿಕ್ರಮ್ ರಕ್ಷಣೆಗೆಂದು ಹೊಳೆಗೆ ಇಳಿದು ರಕ್ಷಿಸಲು ಹೋದಾಗ ನೀರಿನಲ್ಲಿ ಸ್ವಲ್ಪ ದೂರ ಕೊಚ್ಚಿಕೊಂಡು ಹೋಗಿದ್ದರು. ಸ್ಥಳೀಯರಾದ ಸದಾಶಿವ ಶೆಟ್ಟಿಗಾರ್ ಮತ್ತು ಶಂಕರ್ ಪೂಜಾರಿ ಹೊಳೆಗೆ ಇಳಿದು ಇಬ್ಬರನ್ನೂ ರಕ್ಷಿಸಿದ್ದಾರೆ.

ಈ ವೇಳೆ ಅಪಘಾತದಲ್ಲಿ ತಲೆ, ಕೈ ಕಾಲುಗಳಿಗೆ ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *