ಕಾರ್ಕಳ: ತಾಲೂಕಿನ ಕಾಂತಾವರ ಗ್ರಾಮದ ಇರ್ವತ್ತೂರು- ಚಿಲಿಂಬಿ ಸಾರ್ವಜನಿಕ ರಸ್ತೆ ಬದಿ ನಸು ಕಂದು ಬಣ್ಣದ ದನದ ಮೃತದೇಹವೊಂದು ಪತ್ತೆಯಾದ ಘಟನೆ ಸೆ.30ರಂದು ಬೆಳಗ್ಗೆ ನಡೆದಿದೆ.

ಪೊಲೀಸರು ಈ ಬಗ್ಗೆ ವಿಚಾರಿಸಿದಾಗ ದನದ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಯಾರೋ ಅಪರಿಚಿತರು ಈ ದನವನ್ನು ಎಲ್ಲಿಂದಲೋ ಕಳವು ಮಾಡಿ ಸಾಗಿಸುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



