ಸಿದ್ದಕಟ್ಟೆ: ದಾನಗಳಲ್ಲಿಯೇ ಶ್ರೇಷ್ಠ ದಾನ ಅನ್ನದಾನ ಎಂಬ ಮಾತಿದೆ, ಅದರಂತೆ ಜವನ್ಯೆರ್ ದೇವಸ & ಬಜರಂಗದಳ ಸಿದ್ದಕಟ್ಟೆ ತಂಡದ ಪದಾಧಿಕಾರಿಗಳು ತಮ್ಮ ತಂಡದ ಸದಸ್ಯ ದಿ. ದುರ್ಗಾಪ್ರಸಾದ್ ಆಚಾರ್ಯ ರವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಕಾರ್ಕಳದ ವಿಜೇತ ವಿಶೇಷ ಶಾಲೆಗೆ ಅನ್ನದಾನದ ವ್ಯವಸ್ಥೆ ಮಾಡಿದರು.
ಕಳೆದ ವರ್ಷ ತಾನು ಕೆಲಸ ಮಾಡುತಿದ್ದ ಕಟ್ಟಡದಿಂದ ಬಿದ್ದು ದುರ್ಗಾಪ್ರಸಾದ್ ಇವರು ಮೃತರಾಗಿದ್ದರು. ಸದಾ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.
ಅದ್ದರಿಂದ ಇಂದು ಅವರ ಜನ್ಮದಿನದ ಹಿನ್ನೆಲೆ ಅವರ ಗೆಳೆಯರು ಸೇರಿ ಈ ದಿನ ಒಂದು ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಅವರ ಹುಟ್ಟುಹಬ್ಬ ವನ್ನು ಆಚರಿಸಿದರು.





ಈ ಸಂದರ್ಭದಲ್ಲಿ ಮಹೇಶ್ ಆಚಾರ್ಯ, ದೀಕ್ಷಿತ್, ದೀಕ್ಷಿತ್ ಪೂಜಾರಿ, ಉಮೇಶ್, ನಿತಿನ್ ಪೂಜಾರಿ, ನವೀನ್, ಅರುಣ್, ಅಭಿಜಿತ್, ಪ್ರಶಾಂತ್, ದರ್ಶನ್, ದೀಪಕ್, ತುಷಾರ್, ಮನ್ವಿತ್ ಉಪಸ್ಥಿತರಿದ್ದರು.
ಸಂಸ್ಥೆಗೆ ಸಹಕರಿಸಿದ ತಮಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲೆಂದು ವಿಜೇತ ಶಾಲಾ ಮಕ್ಕಳು ಪ್ರಾರ್ಥಿಸಿದರು.



