ಯೆಯ್ಯಾಡಿಯ ಆಟೋ ರಿಕ್ಷಾ ಹಾಗೂ ಬೈಕ್ ಅಪಘಾತದಲ್ಲಿ ಯುವಕ ಸಾವು

ಮಂಗಳೂರು: ಆಟೊ ರಿಕ್ಷಾ ಹಾಗು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಯೆಯ್ಯಾಡಿ ಜಂಕ್ಷನ್ ನಲ್ಲಿ ಸೆ.17 ರಂದು ನಡೆದಿದೆ.

ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಯೆಯ್ಯಾಡಿ ಬಾರೆಬೈಲ್ ನಿವಾಸಿ ರಾಮಚಂದ್ರ ಅವರ ಪುತ್ರ ಕೌಶಿಕ್ (27) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಮಧ್ಯಾಹ್ನ ಅವರು ತಮ್ಮ ಬುಲೆಟ್ ಬೈಕ್ ನಲ್ಲಿ ಬರುತ್ತಿದ್ದಾಗ ಯೆಯ್ಯಾಡಿ ಜಂಕ್ಷನ್‌ನಲ್ಲಿ ಆಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಆಗ ಬೈಕ್‌ನಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು ಕೌಶಿಕ್ ಅವರು ಮೃತಪಟ್ಟಿದ್ದಾರೆ .

Leave a Reply

Your email address will not be published. Required fields are marked *