ಪುತ್ತೂರು: ಸೆ.23 ರಂದು ನಡೆಯಲಿರುವ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪುತ್ತೂರು ಪೌರ ಕಾರ್ಮಿಕರಿಗೆ ಕ್ರೀಡಾಕೂಟವು ಪುತ್ತೂರಿನ ಮಂಜಲ್ಪಡ್ಪು ಸುದಾನ ವಸತಿಯುತ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

ಕ್ರೀಡಾಕೂಟವನ್ನು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಸ್ಪರ್ಧಾಳಿಗೆ ಬಾಲ್ ನೀಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.


ನಗರಸಭಾ ಸದಸ್ಯರಿಗೆ ಸಂಗೀತ ಕುರ್ಚಿ, ಪಾಸಿಂಗ್ ಬಾಲ್, ವೇಗ ನಡಿಗೆ, ಸದಸ್ಯರ 5 ವರ್ಷದೊಳಗಿನ ಮಕ್ಕಳಿಗೆ ಪಾಸಿಂಗ್ ಬಾಲ್, ಓಟ, ಬಕೆಟ್ ಗೆ ಬಾಲ್ ಹಾಕುವುದು, 10 ವರ್ಷದೊಳಗಿನ ಮಕ್ಕಳಿಗೆ ಓಟ, ಸಂಗೀತ ಕುರ್ಚಿ, ಲಿಂಬೆ ಚಮಚ ಓಟ, 15 ವರ್ಷದೊಳಗಿನ ಮಕ್ಕಳಿಗೆ ಗೋಣಿಚೀಲ ಓಟ, ಇಟ್ಟಿಗೆ ಓಟ, ಗುಂಡೆಸೆತ, 15 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಗುಂಡೆಸೆತ, ಸಂಗೀತ ಕುರ್ಚಿ, ಗೋಣಿಚೀಲ ಓಟ, ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, ಪುರುಷರಿಗೆ ಗುಂಡೆಸೆತ, ಲಾಂಗ್ ಜಂಪ್, 100 ಮೀ. ಓಟ, ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ, ಎಲ್ಲಾ ವಯೋಮಾನದವರಿಗೆ ಚೆಂಡು ತಳ್ಳುವುದು ಸ್ಪರ್ಧೆಗಳು ಸಂಜೆ ತನಕ ಜರುಗಿತು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.




