ಬಂಟ್ವಾಳ: ಕರೋಪಾಡಿ ಗ್ರಾಮದ ಶ್ರೀ ಜಲದುರ್ಗಾಪರಮೇಶ್ವರೀ ದೇವಸ್ಥಾನ ಆನೆಕಲ್ಲು-ಪಡ್ಡು ಇಲ್ಲಿ ಸೆ. 22ರಿಂದ ಅ.02ರ ತನಕ ನವರಾತ್ರಿ ಮಹೋತ್ಸವ ನಡೆಯಲಿದೆ.
ಸದ್ಗುರು ಶ್ರೀಮಾತಾ ಅಮೃತಾನಂದಮಯಿಯವರ ದಿವ್ಯ ಸಂಕಲ್ಪ ಹಾಗೂ ಅನುಗ್ರಹದೊಂದಿಗೆ ಹಾಗೂ ಶ್ರೀ ಅಗಸ್ತ್ಯ ಲೋಪಾಮುದ್ರಾ ದೇವಿಯವರ ಶುಭಾಶೀರ್ವಾದಗಳೊಂದಿಗೆ ನವರಾತ್ರಿ ಮಹೋತ್ಸವವು ನಡೆಯಲಿದ್ದು ವಿವಿಧ ವೈದಿಕ ಕಾರ್ಯಕ್ರಮಗಳು ಜರುಗಲಿದೆ.

ಸೆ. 28ರಂದು ರಾತ್ರಿ 9.00ರಿಂದ ಸಾಂಸ್ಕೃತಿಕ ವೈಭವ ಹಾಗೂ ಭಕ್ತಿ ರಸಮಂಜರಿ ನಡೆಯಲಿದೆ.
ಅ. 01ರಂದು ಬೆಳಿಗ್ಗೆ 10.00ರಿಂದ ಆಯುಧ ಪೂಜೆ , ವಾಹನ ಪೂಜೆ, ಮಧ್ಯಾಹ್ನ 1.30ರಿಂದ “ಏಕಾದಶಿ ಶ್ರೀದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ ನಡೆಯಲಿದೆ.

ಅ. 02ರಂದು ಮಧ್ಯಾಹ್ನ 12ಕ್ಕೆ ವಿದ್ಯಾರಂಭ ಸರಸ್ವತಿ ಪೂಜೆ ನಡೆದು ಬಳಿಕ 1:30ರಿಂದ ಮಹಿಷವಧೆ ಯಕ್ಷಗಾನ ಬಯಲಾಟ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ಷೇತ್ರದ ಧರ್ಮದರ್ಶಿಗಳು, ಹಾಗೂ ಆಡಳಿತ ಮೋಕ್ತೇಸರರು ವಿನಂತಿಸಿದ್ದಾರೆ.




