Breaking
25 Sep 2026, Fri

ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಜಾಮೀನು ಅರ್ಜಿ ಸೆ.16ಕ್ಕೆ ಮುಂದೂಡಿಕೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣ ಮತ್ತು ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಜಾಮೀನು ಅರ್ಜಿಯ ಮುಂದೂಡಿಕೆಯಾಗಿದೆ.

ಈ ಕುರಿತು ಸೆ.12 ರಂದು ಚಿನ್ನಯ್ಯ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿ ವಾದಿಸಿದ್ದು, ಇದಕ್ಕೆ ತಕರಾರು ಸಲ್ಲಿಸಿದ ಎಸ್.ಐ.ಟಿ ಪರ ಸರ್ಕಾರಿ ವಕೀಲ ದಿವ್ಯರಾಜ್ ಹೆಗ್ಡೆ ಆಕ್ಷೇಪಣೆ ಸಲ್ಲಿಸಿ ವಾದಿಸಿದರು.

ಬಳಿಕ ವಾದ ಪ್ರತಿವಾದ ಆಲಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಟಿ. ಹೆಚ್. ಜಾಮೀನು ಅರ್ಜಿಯ ಆದೇಶ ಸೆ.16ಕ್ಕೆ ಮುಂದೂಡಿಕೆ ಮಾಡಿದ್ದಾರೆ.

Leave a Reply

Your email address will not be published. Required fields are marked *