Breaking
24 Mar 2026, Tue

ಬಂಟ್ವಾಳದಲ್ಲಿ ಕಟ್ಟಡ ಪರವಾನಿಗೆಯ ಕಟ್ಟಡದ ವಿನ್ಯಾಸ ನಕ್ಷೆ, ತಾಂತ್ರಿಕ ಅನುಮೋದನೆ ಹಾಗೂ ಸ್ವಾಧೀನ ಪತ್ರ ವಿತರಣಾ ಕಾರ್ಯಕ್ರಮ

ಬಂಟ್ವಾಳ: ತಾಲೂಕು ಪಂಚಾಯತ್ ನ ಎಸ್ ಜಿ ಎಸ್ ವೈ ಸಭಾಂಗಣದಲ್ಲಿ ಏಕ ನಿವೇಶನ ವಿನ್ಯಾಸ ನಕ್ಷೆ ಅನುಮೋದನೆ ಮತ್ತು ಕಟ್ಟಡ ಪರವಾನಿಗೆಯ ಕಟ್ಟಡದ ವಿನ್ಯಾಸನಕ್ಷೆಗೆ ತಾಂತ್ರಿಕ ಅನುಮೋದನೆ ಹಾಗೂ ಸ್ವಾಧೀನ ಪತ್ರ ವಿತರಣಾ ಕಾರ್ಯಕ್ರಮವು ಇಂದು ( ಸೆ. 12) ನಡೆಯಿತು.

ಕಾರ್ಯಕ್ರಮವನ್ನು ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಾಯತ್ರಿ ದೊಂಬರ, ಗುರುಪ್ರಸಾದ್ ಸಹಾಯಕ ನಿರ್ದೇಶಕರು ನಗರ ಯೋಜನಾ ಪ್ರಾಧಿಕಾರ ಮಹಾನಗರ ಪಾಲಿಕೆ ಮಂಗಳೂರು ಇವರು ನಡೆಸಿಕೊಟ್ಟು ಸರ್ಕಾರದ ಇತ್ತೀಚಿನ ಆದೇಶ ಮತ್ತು ಸುತ್ತೋಲೆಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿ ಕುಂದರ್, ಜಿ ಪಂ ಯೋಜನಾ ನಿರ್ದೇಶಕರಾದ ಜಯರಾಂ ಕೆ.ಇ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಚಿನ್ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ತಾರಾನಾಥ್ ಸಾಲ್ಯಾನ್, ಸಹಾಯಕ ನಿರ್ದೇಶಕರಾದ ವಿಶ್ವನಾಥ್ ಬಿ.(ಗ್ರಾ.ಉ), ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *