Breaking
25 Sep 2026, Fri

ಹಸೆಮಣೆ ಏರಬೇಕಿದ್ದ ಜೋಡಿ ಅಪಘಾತದಲ್ಲಿ ಸಾವು

ಶಿವಮೊಗ್ಗ: ಹಸೆಮಣೆ ಏರಬೇಕಿದ್ದ ಜೋಡಿಯೊಂದು ಒಮ್ಮಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತವೊಂದರಲ್ಲಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ನಲ್ಲಿ ನಡೆದಿದೆ.

ರೇಖಾ(20) ಮತ್ತು ಗಂಗೊಳ್ಳಿ ಗ್ರಾಮದ ಬಸವನಗೌಡ ದ್ಯಾಮನಗೌಡ (25) ಮೃತ ದುರ್ದೈವಿಗಳು.

ಆಗಸ್ಟ್ ನಲ್ಲಿ ರೇಖಾ ಮತ್ತು ಬಸವನಗೌಡ ಅವರ ನಿಶ್ಚಿತಾರ್ಥವಾಗಿತ್ತು.

ಮಳೆಯ ಕಾರಣಕ್ಕೆ ಮದುವೆಯನ್ನು ಮುಂದೂಡಿದ್ದ 2 ಕುಟುಂಬಸ್ಥರು, ಡಿಸೆಂಬರ್ ನಲ್ಲಿ ಇಬ್ಬರ ಮದುವೆಗೆ ದಿನಾಂಕ ನಿಗದಿ ಮಾಡಿದ್ದರು.

ಈ ಬಗ್ಗೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *