ಬಂಟ್ವಾಳ: ತಾಲೂಕು ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೆ. 07ರಂದು ನಡೆದ ಚುನಾವಣೆಯಲ್ಲಿ ಸುಜಾತ ಪಿ. ರೈ ಕಲ್ಲಡ್ಕ ಅವರು ಗೆಲುವು ಸಾಧಿಸಿ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ.

ಅಧ್ಯಕ್ಷೆ ಸ್ಥಾನಕ್ಕೆ ಸುಜಾತ ಪಿ.ರೈ ಹಾಗೂ ಸಂಧ್ಯಾರೈ ಬೆಳ್ಳೂರು ಅವರ ನಡುವೆ ಪ್ರಬಲ ಪೈಪೋಟಿ ನಡೆದಿದ್ದು, ಕೊನೆಗೆ ಚುನಾವಣೆಯ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.
ಚುನಾವಣೆಯಲ್ಲಿ ಈ ಹಿಂದೆ ಸಮಿತಿಯ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸುಜಾತ ಪಿ.ರೈ ಅವರು ಅಭೂತಪೂರ್ವ ಗೆಲುವು ಸಾಧಿಸಿ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದರು.

ಉಪಾಧ್ಯಕ್ಷರಾಗಿ ಜ್ಯೋತಿ ರೈ ಮಾಣಿ, ಕಾರ್ಯದರ್ಶಿಯಾಗಿ ಮಂದಾರತಿ ಶೆಟ್ಟಿ ಸಿದ್ದಕಟ್ಟೆ ಹಾಗೂ ಕೋಶಾಧಿಕಾರಿಯಾಗಿ ರೂಪ ಅರಳ, ಜತೆ ಕೋಶಾಧಿಕಾರಿಯಾಗಿ ಶೋಭಾ ಅವರು ಆಯ್ಕೆಯಾಗಿದ್ದಾರೆ.




