Breaking
24 Mar 2026, Tue

ಕಜೆಕಾರು ಶ್ರೀ ಮಹಾದೇವದೇವೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ )ಹಾಗೂ ಪ್ರಗತಿ ಬಂಧು ಒಕ್ಕೂಟಗಳ ( ಬಡಗಕಜೆಕಾರು -ಮಾಡಪಲಿಕೆ -ತೆಂಕಕಜೆಕಾರು ) ಸಹಯೋಗದೊಂದಿಗೆ ಕಜೆಕಾರು ಶ್ರೀ ಮಹಾದೇವದೇವೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ಸೆ . 7 ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು.

ಪೂಜಾ ಕಾರ್ಯಕ್ರಮದ ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸಕರಾಗಿ ಮಾತನಾಡಿದ ಶ್ರೀ ಗೋವಿಂದ ದಾಸ ಕಾಲೇಜ್ ಸುರತ್ಕಲ್ ಉಪನ್ಯಾಸಕಿ ಹಾಗೂ ನಮ್ಮ ಟಿವಿಯ ನಿರೂಪಕರು ಅಕ್ಷತಾ ವಿ ಅವರು ಹಿಂದೂ ಧರ್ಮದ ಬಗ್ಗೆ ತುಳುನಾಡಿನ ಸಂಸ್ಕೃತಿ ಬಗ್ಗೆ ಧರ್ಮವನ್ನು ಮಾನವ ಜೀವನದಲ್ಲಿ ಅಳವಡಿಸುವ ಬಗ್ಗೆ ಹಾಗೆಯೇ ಒಂದು ಕುಟುಂಬ ಧಾರ್ಮಿಕ ನೆಲೆಯಲ್ಲಿ ಯಾವ ರೀತಿ ಬದುಕಬೇಕು ಧರ್ಮದ ನೆಲೆಗಟ್ಟು ದೈವ ದೇವರ ಅನುಸರಣೆ ಹಾಗೂ ಉಪಾಸನ ಯಾವ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂಬ ವಿಚಾರದ ಬಗ್ಗೆ ಮನಮುಟ್ಟುವಂತೆ ವಿವರಿಸಿದ್ದರು.

ಅತಿಥಿ ನೆಲೆಯಲ್ಲಿ ಮಾತನಾಡಿದ ಜಯನಂದ ಪಿ ಇವರು ಕಜೆಕಾರು ಭಕ್ತರ ಧರ್ಮ ಜಾಗೃತಿ ಹಾಗೂ ಕ್ಷೇತ್ರದ ಪರಂಪರೆಯ ಬಗ್ಗೆ ಹಾಗೂ ಕ್ಷೇತ್ರದ ಅಭಿವೃದ್ಧಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವು ಸದಾ ಬೆನ್ನೆಲುಬಾಗಿ ನಿಲ್ಲುತೆ ಎಂಬ ಮಾತಿನೊಂದಿಗೆ ಮುಂಬರುವ ಧರ್ಮಸ್ಥಳ ಕ್ಷೇತ್ರದಲ್ಲಿ ನಡೆಯುವ ಭಜನಾ ಕಮ್ಮಟಕ್ಕೆ ಶ್ರೀ ಕ್ಷೇತ್ರದ ಅಭಿನಂದನೆಗೆ ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದ ಭಜನಾ ಮಂಡಳಿ ಆಯ್ಕೆಯಾದದ್ದನ್ನು ಪ್ರಕಟಿಸಿ ಅಭಿನಂದಿಸಿದರು.

ವೇದಿಕೆಯಲ್ಲಿ ಕಜೆಕಾರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್ ಬಂಗೇರ, ಉಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ವಸಂತ ಸಾಲಿಯನ್ ರಾಮನಗರ, ಒಕ್ಕೂಟದ ಪದಾಧಿಕಾರಿಗಳು, ಸಿ ಎ ಬ್ಯಾಂಕಿನ ನಿರ್ದೇಶಕರು, ಪಂಚಾಯಿತಿ ಸದಸ್ಯರು, ಊರ ಗಣ್ಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಗುಣಶೇಖರ ಕೊಡಂಗೆ ಪ್ರಸ್ತಾಪಿಸಿ ಸ್ವಾಗತಿಸಿದರು, ಸೇವಾನಿರತೆ ಸುಧಾ ರೈ ವಂದಿಸಿದರು, ಗ್ರಾಮ ಪಂಚಾಯತ್ ಅಧ್ಯಕ್ಷ ದೇವದಾಸ್ ಅಬುರ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *