Breaking
22 Mar 2026, Sun

ಉಡುಪಿಯಲ್ಲಿ 16 ವರ್ಷದ ಬಾಲಕ ನಾಪತ್ತೆ

ಉಡುಪಿ: ಬಾಲಕನೊಬ್ಬ ನಾಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ರತನ್ ಕಾಮತ್ (16) ನಾಪತ್ತೆಯಾದ ಬಾಲಕನಾಗಿದ್ದಾನೆ. ಈತ ಮಹಿಷಮರ್ದಿನಿ ದೇವಸ್ಥಾನ ಹತ್ತಿರ ಬೈಲೂರು ಕೊರಂಗ್ರಪಾಡಿ ಉಡುಪಿಯಿಂದ ಸಂಜೆ ಸುಮಾರು 5 ಗಂಟೆ ಸುಮಾರಿಗೆ ಹೋರಟಿದ್ದ.

ಈ ವೇಳೆ ಆತ ಲೈಟ್ ಗ್ರೀನ್ ಕಲರ್ ಪ್ಯಾಂಟ್/ಕ್ರೀಮ್ ಕಲರ್ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಟಿ ಶರ್ಟ್ ಧರಿಸಿದ್ದು ಶಾಲಾ ಬ್ಯಾಗ್ ಹಾಕಿಕೊಂಡಿದ್ದು ಮನೆಗೆ ಬಾರದೆ ಕಾಣೆಯಾಗಿದ್ದಾನೆ.

ಈತನ ಸುಳಿವು ಸಿಕ್ಕಲ್ಲಿ ಮಹಿಳಾ ಪೊಲೀಸ್ ಠಾಣೆ, ಉಡುಪಿ ನಂಬ್ರ 08202525599, ಕಂಟ್ರೋಲ್ ರೂಮ್ ನಂಬ್ರ:08202526444 ಗೆ ಮಾಹಿತಿ ನೀಡುವಂತೆ ಈತನ ಪೋಷಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *