Breaking
23 Mar 2026, Mon

ಮಂಗಳೂರು: ಇನ್ ಸ್ಟಾ ಗ್ರಾಂ ಪರಿಚಯ: ಮದುವೆಯಾಗುವುದಾಗಿ ನಂಬಿ ಹೋದಾಕೆಗೆ ಮೋಸ: ಯುವತಿ ನಾಪತ್ತೆ

ಮಂಗಳೂರು: ಇನ್ ಸ್ಟಾಗ್ರಾಂ ನಲ್ಲಿ ಪರಿಚಯವಾಗಿದ್ದ ಯುವಕನನ್ನು ಮದುವೆಯಾಗುವುದಾಗಿ ಮನೆ ಬಿಟ್ಟು ಹೋದ ಯುವತಿಗೆ ಯುವಕ ವಂಚಿಸಿದ್ದು ಬಳಿಕ ಮನೆಗೆ ವಾಪಸ್ಸಾದ ಆಕೆ ಸೆ.2ರಂದು ನಾಪತ್ತೆಯಾಗಿದ್ದಾಳೆ.

ಈ ಕುರಿತು ಯುವತಿಯ ಸಂಬಂಧಿಕರು ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಶ್ವಿನಿ (21ವ) ಎಂಬಾಕೆ ಕಳೆದ 1 ವರ್ಷದ ಹಿಂದೆ ಇನ್ ಸ್ಟಾಗ್ರಾಂ ನಲ್ಲಿ ಚಿಕ್ಕಬಳ್ಳಾಪುರದ ಸಿದ್ಲಗಟ್ಟೆಯ ಮಹೇಶ್ ಎಂಬಾತನ ಜೊತೆ ಪರಿಚಯ ಬೆಳೆಸಿಕೊಂಡು, ಆತನನ್ನು ವಿವಾಹವಾಗುವುದಾಗಿ ಹೇಳಿ ಆತನ ಜೊತೆ ಹೊರಟು ಹೋಗಿದ್ದಳು. ಆದರೆ ಯುವಕ ಆತನನ್ನು ಮದುವೆಯಾಗದೆ, ಕೆಲಸಕ್ಕೆ ಕಳಿಸಿದ್ದು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಈ ಬಗ್ಗೆ ಅಶ್ವಿನಿ ಸಂಬಂಧಿಗೆ ಕರೆ ಮಾಡಿ ತಿಳಿಸಿ ಸೆ. 01 ರಂದು ರಾತ್ರಿ ಸುಮಾರು 11.30ಕ್ಕೆ ಮನೆಗೆ ವಾಪಾಸ್ಸಾಗಿದ್ದಳು.

ಅಂದು ರಾತ್ರಿ ಊಟ ಮಾಡಿ ಮಲಗಿದ್ದ ಆಕೆ ಬೆಳಗ್ಗೆ ಸುಮಾರು 4.00 ಗಂಟೆಗೆ ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *