Breaking
25 Sep 2026, Fri

ಎಸ್ಐಟಿಯಿಂದ ಯೂಟ್ಯೂಬರ್ ಅಭಿಷೇಕ್ ನ ವಿಚಾರಣೆ; ಇಂದು ಕೂಡ ವಿಚಾರಣೆ ಸಾಧ್ಯತೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೊತಿಟ್ಟ ಪ್ರಕರಣಗಳು ಮತ್ತು ಸುಜಾತಾ ಭಟ್ ಕುರಿತ ಸುಳ್ಳು ಪ್ರಕರಣಗಳ ವಿಡಿಯೋ ಮಾಡಿ ಪ್ರಸಾರ ಮಾಡಿದ್ದ ಯೂಟ್ಯೂಬರ್ ಅಭಿಷೇಕ್ ನನ್ನು ಎಸ್.ಐ.ಟಿ ಅಧಿಕಾರಿಗಳು ಸೆ.3 ರಂದು ರಾತ್ರಿ ಪೂರ್ತಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿಯಲ್ಲಿರುವ ಎಸ್.ಐ.ಟಿ ಕಚೇರಿಗೆ ಸಂಜೆಯ ವೇಳೆ ವಿಚಾರಣೆಗೆ ದಾಖಲೆಗಳ ಜತೆ ಹಾಜರಾಗಿದ್ದ ಯೂಟ್ಯೂಬರ್ ಅಭಿಷೇಕ್ ಗೆ ಇಂದು ಮುಂಜಾನೆಯವರೆಗೆ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ವಿಚಾರಣೆ ನಡೆಸಿದ್ದು ಇವತ್ತು ಕೂಡ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಬುರುಡೆಗಾಗಿ ಜಯಂತ್ ಟಿ. ಜತೆ ಸೇರಿ ಅಭಿಷೇಕ್ ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ರಾತ್ರಿಯಿಡೀ ಹುಡುಕಾಟ ನಡೆಸಿದ್ದರು. ಮಾತ್ರವಲ್ಲದೆ ಇದರ ವಿಡಿಯೋ ಚಿತ್ರೀಕರಣವನ್ನು ನಡೆಸಿದ್ದರು. ಇದಲ್ಲದೆ ಎಸ್ ಐಟಿ ಚಿನ್ನಯನನ್ನು ವಶಕ್ಕೆ ಪಡೆದ ಬಳಿಕ ಚಿನ್ನಯ್ಯನ ಮಾಸ್ಕ್ ಹೊರತಾದ ಸಂದರ್ಶನ ಮಾಡಿದ ವಿಡಿಯೋ ಕೂಡ ಹರಿಬಿಡಲಾಗಿತ್ತು.

ಈ ಹಿನ್ನೆಲೆ ಈತನ ವಿರುದ್ಧ ದೂರು ದಾಖಲಿಸಲಾಗಿದ್ದು ಇದರ ವಿಚಾರಣೆ ನಡೆಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *