ಚಿಕ್ಕಮಗಳೂರು: ಜಿಲ್ಲೆಯ, ಮೂಡಿಗೆರೆ ತಾಲೂಕಿನ ಬಣಕಲ್ ನ ಸುಭಾಷ್ ನಗರದ 25 ನೇ ವರ್ಷದ ಸಾರ್ವಜನಿಕ ಶ್ರೀ ವಿದ್ಯಾಗಣಪತಿ ಗಣೇಶ ಚತುರ್ಥಿ ಆಚರಣೆ ಒಟ್ಟು ಏಳು ದಿನಗಳ ಕಾಲ ನಡೆಯಿತು.
ಈ ನಿಟ್ಟಿನಲ್ಲಿ ಸೆ.2 ರಂದು ನಡೆದ ವಿದ್ಯಾಗಣಪತಿ ಮಹೋತ್ಸವದ ವಿಸರ್ಜನಾ ಮೆರವಣಿಗೆಯಲ್ಲಿ ಕಾಶಿಯ ಗಂಗಾ ಆರತಿಯಿಂದ ಪ್ರೇರಣೆ ಪಡೆದು ಇದೇ ಮೊದಲ ಬಾರಿಗೆ ಗಣಪತಿ ದೇವರಿಗೆ ಮಹಾ ಆರತಿ ಬೆಳಗಿಸಲಾಯಿತು.

ನವೀನ್ ಧರ್ಮಸ್ಥಳ ಇವರ ಮಾರ್ಗದರ್ಶದಲ್ಲಿ ಉಜಿರೆಯ ಹಿಪ್-ಬಾಯ್ಸ್ ನೃತ್ಯ ತಂಡದ ನೃತ್ಯಗಾರರು ಮಹಾ ಆರತಿಯನ್ನು ನೆರವೇರಿಸಿದರು.
ಈ ದೃಶ್ಯವು ಅಲ್ಲಿ ನೆರೆದಿರುವ ನೂರಾರು ಭಕ್ತರ ಕಣ್ಮನ ಸೆಳೆದಿದ್ದು, ಮೆಚ್ಚುಗೆಗೆ ಪಾತ್ರವಾಯಿತು.



