Breaking
20 Jun 2026, Sat

ಮಂಚಕಲ್ಲಿನಲ್ಲಿ 8ನೇ ವರ್ಷದ ಮೊಸರು ಕುಡಿಕೆ ಉತ್ಸವಕ್ಕೆ ಚಾಲನೆ

ಬಂಟ್ವಾಳ: ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಗೆಳೆಯರ ಬಳಗದ ವತಿಯಿಂದ ದಿವಂಗತ ಸದಾಶಿವ ಶೆಟ್ಟಿಗಾರ್ ವೇದಿಕೆಯಲ್ಲಿ ಆ. 29 ರಂದು 8ನೇ ವರ್ಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಗಬೆಟ್ಟು ಗುತ್ತು ಉದಯ ಕುಮಾರ್ ಜೈನ್ ಅವರು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಮೊಸರು ಕುಡಿಕೆ ಉತ್ಸವ ಆಚರಣೆ ಮೂಲಕ ಸಂಘಟನೆ ಶಕ್ತಿಯಾಗಿ ರೂಪುಗೊಳ್ಳುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಅರ್ಚಕ ಗುಣಪಾಲ ಪರಾಡ್ಕರ್, ಮುಖ್ಯ ಶಿಕ್ಷಕಿ ವಿನಿತಾ ಅರ್ಕುಳ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಎಸ್. ಪಿ. ಶ್ರೀಧರ್, ಸುರೇಶ್ ಸಾಲ್ಯಾನ್ ಮಂಚಕಲ್ಲು, ಹರಿಶ್ಚಂದ್ರ ಪೂಜಾರಿ ಮಂಚಕಲ್ಲು, ಸಂಘದ ಅಧ್ಯಕ್ಷ ಸಂಪತ್ ದಾಸ್ ಮಂಚಕಲ್ಲು, ಸುಪ್ರೀತ್ ಪೂಜಾರಿ, ದೇವರಾಜ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಕೃಷ್ಣ ವೇಷ ಸ್ಪರ್ಧೆ, ವಿವಿಧ ಕ್ರೀಡಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಯ ನಾಯ್ಕ್ ಸ್ವಾಗತಿಸಿ, ಶಾಶ್ವತ್ ಎಸ್. ಪಿ. ವಂದಿಸಿದರು.

Leave a Reply

Your email address will not be published. Required fields are marked *