Breaking
22 Mar 2026, Sun

ಕೇಸರಿ ಟವೆಲ್ ಹಾಕಿಕೊಂಡಿದ್ದಕ್ಕೆ ಯುವಕನೊಬ್ಬನ ಮೇಲೆ ಮೂವರಿಂದ ಹಲ್ಲೆ

ಬೆಂಗಳೂರು: ಕೇಸರಿ ಟವೆಲ್ ಹಾಕಿಕೊಂಡಿದ್ದಕ್ಕೆ ಯುವಕನೊಬ್ಬನ ಮೂವರು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಡೆದಿದೆ.

ಸ್ಲಿಂದರ್ ಕುಮಾರ್ ಎಂಬುವರ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ತಬ್ರೇಜ್, ಇಮ್ರಾನ್ ಖಾನ್, ಅಜೀಝ್ ಖಾನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಲಿಂದರ್ ಕುಮಾರ್ ಅವರು ಕೇಸರಿ ಬಣ್ಣದ ಟವೆಲ್ ಹಾಕಿಕೊಂಡಿದ್ದಕ್ಕೆ ಮೂವರು ಯುವಕರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಆ.24 ರ ರಾತ್ರಿ 9:30ರ ಸುಮಾರಿಗೆ ಕಲಾಸಿಪಾಳ್ಯದಲ್ಲಿ ರಾಯಲ್ ಟ್ರಾವೆಲ್ಸ್ ಕಂಪನಿಯಲ್ಲಿ ಹಲ್ಲೆಗೊಳಗಾದ ಸ್ಲಿಂದರ್ ಕುಮಾರ್ ಮತ್ತು ಹರಿಕೃಷ್ಣ ಕೆಲಸ ಮಾಡುತ್ತಿದ್ದರು. ಈ ವೇಳೆ ಇವರ ಬಳಿಗೆ ಬಂದ ಆರೋಪಿಗಳು ಸ್ವಿಂದರ್ ಕುಮಾರ್ ಅವರನ್ನು ನಿಲ್ಲಿಸಿಕೊಂಡು “ನೀನು ಯಾಕೆ ಕೇಸರಿ ಟಾವೆಲ್ ಹಾಕಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ತಳ್ಳಿದ್ದಾರೆ.

ಇದನ್ನು ನೋಡಿದ ಹರಿಕೃಷ್ಣ ಅವರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಹೋಗಿದ್ದಾರೆ. ಆಗ ಆರೋಪಿಗಳು ಅವ್ಯಾಚ್ಯ ಶಬ್ದಗಳಿಂದ ಬೈದು ಹರಿಕೃಷ್ಣ ಅವರ ಶರ್ಟ್ ಅನ್ನು ಹರಿದು ಕೈಯಿಂದ ಹೊಡೆದಿದ್ದಾರೆ. ಬಳಿಕ ಆರೋಪಿಗಳು “ನಿಮ್ಮ ಕೂಲಿ ಮಾಡುವ ಹುಡುಗ ಯಾಕೆ ಕೇಸರಿ ಟಾವೆಲ್ ಹಾಕಿದ್ದಾನೆ. ಅದನ್ನು ತಗಿಸಿ” ಎಂದು ಏರುದನಿಯಲ್ಲಿ ಹರಿಕೃಷ್ಣ ಅವರಿಗೆ ಹೇಳಿ ಅಲ್ಲಿಂದ ಹೋರಟು ಹೋಗಿದ್ದಾರೆ.

ಈ ಕುರಿತು ಹಲ್ಲೆಗೊಳಗಾದವರು ಆರೋಪಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನಮ್ಮ ಜೊತೆ ಮತ್ತೆ ಗಲಾಟೆ ಮಾಡದಂತೆ ಸೂಕ್ತ ತಿಳುವಳಿಕೆ ನೀಡಬೆಕೇಂದು ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *