Breaking
21 Jun 2026, Sun

ನಟ ದಿನೇಶ್‌ ಮಂಗಳೂರು ಬ್ರೇನ್‌ ಹ್ಯಾಮರೇಜ್‌ ನಿಂದ ನಿಧನ

ಕುಂದಾಪುರ: ನಟ ಹಾಗೂ ಕಲಾನಿರ್ದೇಶಕ ದಿನೇಶ್‌ ಮಂಗಳೂರು (52 ವ) ಅವರು ಬ್ರೇನ್‌ ಹ್ಯಾಮರೇಜ್‌ ನಿಂದ ಆ. 24 ರಂದು ನಿಧನರಾಗಿದ್ದಾರೆ.

ಅವರು ಕಳೆದ ಕೆಲ ದಿನಗಳಿಂದ ಬ್ರೇನ್ ಹ್ಯಾಮರೇಜ್‌ನಿಂದ ಕುಂದಾಪುರದ ಸರ್ಜನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಇವರು KGF ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು ಹಳೆಯ-ಹೊಸ ತಲೆಮಾರಿನ ಕಲಾವಿದರೊಂದಿಗೆ ಅವರು ಮಾಡಿದ ಕೆಲಸಗಳು ಸ್ಮರಣೀಯವಾಗಿವೆ. ಸರಳ ವಿನಮ್ರ ವ್ಯಕ್ತಿತ್ವದ ಮೂಲಕ ಅವರು ಎಲ್ಲರ ಮನ ಗೆದ್ದಿದ್ದರು.

Leave a Reply

Your email address will not be published. Required fields are marked *