ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮ ನಕ್ಸಲ್ ಚಟುವಟಿಕೆಗಳಿಂದ ಸುದ್ದಿಯಾಗಿದ್ದ ಊರು, ಇದೀಗ ಆ ಹಣೆಪಟ್ಟಿ ಕಳಚಿಕೊಂಡಿದ್ದು, ರಾಷ್ಟ್ರೀಯ ಸಾಹಸ ಪ್ರವಾಸೋದ್ಯಮ ಪ್ರಶಸ್ತಿಗೆ ಭಾಜನವಾಗಿದೆ.
ಈ ಮೂಲಕ ರಾಷ್ಟ್ರೀಯ ಸಾಹಸ ಪ್ರವಾಸೋದ್ಯಮ ಪ್ರಶಸ್ತಿಗೆ ಪಾತ್ರವಾದ ಕರ್ನಾಟಕದ ಏಕೈಕ ಗ್ರಾಮವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ದೇಶದ ಗ್ರಾಮಗಳಲ್ಲಿ ಸ್ಪರ್ಧಾತ್ಮಕತೆ ಮತ್ತು ಸ್ವಾವಲಂಬನೆಯ ಒಲವು ಹೆಚ್ಚಿಸುವುದಕ್ಕಾಗಿ ಪ್ರವಾಸೋದ್ಯಮ ಸಚಿವಾಲಯವು ಕಳೆದ ವರ್ಷ ‘ಬೆಸ್ಟ್ ಟೂರಿಸಂ ವಿಲೇಜ್ ಕಾಂಪಿಟೀಷನ್’ ಆರಂಭಿಸಿತ್ತು. ಇದರ ಅಡಿಯಲ್ಲಿ ಪ್ರತಿ ಕೆಟಗರಿಯಿಂದ ಅತ್ಯುತ್ತಮ ಐದು ಗ್ರಾಮೀಣ ಪ್ರವಾಸೋದ್ಯಮ ಗ್ರಾಮಗಳನ್ನು ಗುರುತಿಸಲಾಗುತ್ತದೆ. ಸ್ಪರ್ಧೆಯು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮೂರು ಹಂತಗಳಲ್ಲಿ ನಡೆಯುತ್ತದೆ.
ಕುತ್ಲೂರಿನ ಸಾಫ್ಟ್‌ವೇರ್ ಇಂಜಿನಿಯರ್ ಹರೀಶ್ ಡಾಕಯ್ಯ ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕತಾರ್‌ನಲ್ಲಿ ಕೆಲಸ ಮಾಡುವ ಅದೇ ಗ್ರಾಮದ ಸಂದೀಪ್ ಪೂಜಾರಿ ಮತ್ತು ಶಿವರಾಜ್ ಜತೆಗೂಡಿ ಸ್ನೇಹಿತರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.