ವಿಟ್ಲ: ಕಡೂರು – ಕಾಞಂಗಾಡು ಹೆದ್ದಾರಿಯ ಕುದ್ದುಪದವಿನ ಅಂಗಡಿಯೊಂದಕ್ಕೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಶಾಂತಿ ಸೃಷ್ಟಿಸಿದ್ದಾರೆ.
ಕುದ್ದುಪದವು ನಿವಾಸಿ ಅಶ್ರಫ್ ಅವರಿಗೆ ಸೇರಿದ ಅಂಗಡಿ ಇದಾಗಿದ್ದು, ಶನಿವಾರ ಬೆಳಗ್ಗಿನ ಜಾವ ಅಡ್ಯನಡ್ಕ ಭಾಗಕ್ಕೆ ಹೋಗುತ್ತಿದ್ದ ಕೋಳಿ ಸಾಗಾಟದ ವಾಹನದವರು ಬೆಂಕಿಯನ್ನು ಗಮನಿಸಿ, ಮಾಹಿತಿ ನೀಡಿ, ಬೆಂಕಿ ಆರಿಸಿದ್ದಾರೆ.