ಬಂಟ್ವಾಳ : ಶ್ರೀ ದುರ್ಗಾಪಾಶಾಂಕುಶಧಾರಿಣಿ ದೇವಿ ಕ್ಷೇತ್ರನೇಲ್ಯಕುಮೇರು, ಕುಕ್ಕಿಪಾಡಿ, ಇಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಪೂಜೋತ್ಸವವು 3-10-2024ಗುರುವಾರದಿಂದಮೊದಲ್ಗೊಂಡು 12-10–2024ಶನಿವಾರದವರೆಗೆ ನಡೆಯಲಿದೆ.
ಇತಿಹಾಸ ಹೊಂದಿರುವ ಕಾರಣಿಕದ ಕ್ಷೇತ್ರ ಇದಾಗಿದ್ದು ದಿ| ನಕ್ಕುರ ಪಂಡಿತ್ ಆರಾಧಿಸಲ್ಪಡುತ್ತಿದ್ದರು. ಪ್ರಸ್ತುತ ಶ್ರೀ ರಮೇಶ್ ಪಂಡಿತ್ ಪೌರೋಹಿತ್ಯದಲ್ಲಿ ನವರಾತ್ರಿ ಪೂಜೆಯು ವಿಜೃಂಭಣೆಯಿಂದ ನಡೆಯುತ್ತಿದೆ.
ಅಕ್ಟೋಬರ್ 3, ಗುರುವಾರ ಬೆಳಿಗ್ಗೆ 8:30ಕ್ಕೆ ಗಣಹೋಮ,ಬೆ.9ಕ್ಕೆ ಮಹಾಕಲಶಾಭಿಷೇಕ ಹಾಗೂ ಕಲಶ ಪ್ರತಿಷ್ಠೆ, ಪ್ರತೀ ದಿನ ಶ್ರೀದೇವಿಗೆ ಹೊಸ ಪಟ್ಟೆಸೀರೆ ಉಡಿಸಿ ಸರ್ವಾಲಂಕಾರ ಪೂಜೆ, ಮಧ್ಯಾಹ್ನಮಹಾಪೂಜೆ, ಅನ್ನದಾನ ಸೇವೆ ಹಾಗೂ ಸಂಜೆ ಭಜನೆ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಎಂದು ಕ್ಷೇತ್ರದ ಧರ್ಮದರ್ಶಿ ರಮೇಶ್ ಪಂಡಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.