Breaking
23 Dec 2024, Mon

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.) ಮಿಜಾರು ಮಾಸಿಕ ಸೇವಾ ಯೋಜನೆ ಹಸ್ತಾಂತರ

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.) ಮಿಜಾರು ದಕ್ಷಿಣ ಕನ್ನಡ.

47ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ
ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ನಿವಾಸಿಯಾಗಿರುವ ಹರೀಶ್ ಇವರ ಮಗನಾದ ಸಾತ್ವಿಕ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಈಗಾಗಲೇ ತುರ್ತು ಚಿಕಿತ್ಸೆ ಪಡೆದಿದ್ದು, ಈಗಾಗಲೇ ಮೂರು ಬಾರಿ ಡಯಾಲಿಸಿಸ್ ಮಾಡಲಾಗಿದೆ.ಹರೀಶ್ ರವರ ಹೆಂಡತಿಯು ಒಂದು ಕಿಡ್ನಿ ನೀಡಲು ಮುಂದೆ ಬಂದಿದ್ದಾರೆ. ವೈದ್ಯರು ಈಗಾಗಲೇ 10 ಲಕ್ಷ ರೂಪಾಯಿಗಳ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ. ಹಾಗೂ ಹರೀಶ್ ರವರ ಹೃದಯ ಸರ್ಜರಿ ಆಗಿದ್ದು ಇವರಿಗೆ ಕೆಲಸ ಮಾಡಲು ಅಸಾಧ್ಯವಾಗಿದೆ. ಆದ್ದರಿಂದ
ದಯಮಾಡಿ ನಿಮ್ಮ ತಂಡದ ಮೂಲಕ ಸಹಾಯ ಮಾಡಿ ಎಂದು ನಮ್ಮ ಬಳಿ ಕೇಳಿಕೊಂಡಿದ್ದಾರೆ.ಇವರ ಮನವಿಗೆ ಸ್ಪಂದಿಸಿ ಇಂದು 15,000/-ರೂಪಾಯಿಯ ಚೆಕ್ ನ್ನು ಚಂದ್ರಹಾಸ್ ಕೊಟ್ಟಾರಿ ಇವರ ಮೂಲಕ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ತಂಡದ ಅಧ್ಯಕ್ಷರಾದ ಸಂದೀಪ್ ಮಿಜಾರ್ ಹಾಗೂ ಉಪಾಧ್ಯಕ್ಷರಾದ ಚಂದ್ರಶೇಖರ್ ಕೋಟ್ಯಾನ್ ಸರಪಾಡಿ, ಉಮೇಶ್ ಕೆ. ಬಂಟ್ವಾಳ ಉಪಸ್ಥಿತರಿದ್ದರು.

48ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ
ಬೆಳ್ತಂಗಡಿ ತಾಲೂಕು ವೇಣೂರು ನಿವಾಸಿಯಾಗಿರುವ ಸುಮಲತಾ ಇವರ ಗಂಡ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಈಗ ಇವರ ಗಂಡ ರವಿ ಹಾಗೂ ಮೂರು ಹೆಣ್ಣು ಮಕ್ಕಳು ಹಾಗೂ ರವಿ ಇವರ ಬುದ್ದಿಮಾಂದ್ಯ ತಮ್ಮನ ಜೊತೆಗೆ ವಾಸ ಮಾಡುತ್ತಿದ್ದೇವೆ. ನಾವು ತುಂಬಾ ಆರ್ಥಿಕವಾಗಿ ಕಷ್ಟದಲ್ಲಿದ್ದು ನಮಗೆ ದಿಕ್ಕೆ ತೋಚದಂತಾಗಿದೆ. ಆದ್ದರಿಂದ ನಿಮ್ಮ ಸಂಸ್ಥೆಯ ಮೂಲಕ ನಮಗೆ ಸಹಾಯ ಮಾಡಿ ಎಂದು ನಮ್ಮ ಬಳಿ ಮನವಿ ಮಾಡಿಕೊಂಡಿದ್ದರು. ಇವರ ಮನವಿಗೆ ಸ್ಪಂದಿಸಿ ಇಂದು 15,000/- ರೂಪಾಯಿಯ ಚೆಕ್ಕ್ ನ್ನು ಕೃಷ್ಣ ಸುವರ್ಣ ವೇಣೂರು ಇವರ ಮೂಲಕ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ತಂಡದ ಕೋಶಾಧಿಕಾರಿ ಸಂತೋಷ್ ಪೂಜಾರಿ ಹೊಕ್ಕಾಡಿಗೋಳಿ ಹಾಗೂ ಸ್ಥಳೀಯರಾದ ಸುಜಿತ್ ಹಾಗೂ ಸುರೇಂದ್ರ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *