Breaking
23 Dec 2024, Mon

10 ವರ್ಷ ಪೂರೈಸಿದ ‘ಮನ್​ ಕಿ ಬಾತ್’ ಹಲವು ವಿಶೇಷತೆಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ

ದೆಹಲಿ: ಮನ್​ ಕಿ ಬಾತ್​ ಕಾರ್ಯಕ್ರಮವು 10 ವರ್ಷಗಳನ್ನು ಪೂರೈಸಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

“ಇವತ್ತಿನ ಸಂಚಿಕೆ ನನ್ನನ್ನು ಭಾವುಕರನ್ನಾಗಿಸಿದೆ, ಹಲವು ಹಳೆಯ ನೆನಪುಗಳು ನನ್ನನ್ನು ಸುತ್ತುತ್ತಿವೆ, ಮನ್ ಕಿ ಬಾತ್ ಪಯಣ 10 ವರ್ಷ ಪೂರೈಸುತ್ತಿದೆ. ಮನ್ ಕಿ ಬಾತ್’ 10 ವರ್ಷಗಳ ಹಿಂದೆ ಅಕ್ಟೋಬರ್ 3 ರಂದು ವಿಜಯದಶಮಿ ದಿನದಂದು ಪ್ರಾರಂಭವಾಯಿತು”.

ಮನ್ ಕಿ ಬಾತ್ ಮೂಲಕ ಪ್ರಧಾನಿ ಮೋದಿ ಅವರು ಪುದುಚೇರಿಯ ಕಡಲತೀರಗಳಲ್ಲಿ ಸ್ವಚ್ಛತಾ ಅಭಿಯಾನದ ಕುರಿತು ಚರ್ಚಿಸಿದರು. “ದೇಶದ ಪ್ರತಿಯೊಂದು ಭಾಗದಲ್ಲೂ ಸ್ವಚ್ಛತೆಯ ಬಗ್ಗೆ ಕೆಲವು ವಿಶಿಷ್ಟ ಪ್ರಯತ್ನಗಳು ನಡೆಯುತ್ತಿರುವುದು ನಮಗೆ ಕಂಡುಬರುತ್ತದೆ. ಕೆಲವೇ ದಿನಗಳಲ್ಲಿ, ಅಕ್ಟೋಬರ್ 2 ರಂದು, ಸ್ವಚ್ಛ ಭಾರತ್ ಮಿಷನ್ 10 ವರ್ಷಗಳನ್ನು ಪೂರೈಸುತ್ತಿದೆ. ಭಾರತೀಯ ಇತಿಹಾಸದಲ್ಲಿ ಇದನ್ನು ಇಷ್ಟು ದೊಡ್ಡ ಜನಾಂದೋಲನವನ್ನಾಗಿ ಮಾಡಿದವರನ್ನು ಅಭಿನಂದಿಸುವ ಸಂದರ್ಭವಿದು ಎಂದರು”.

ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದು ‘ಮನ್ ಕಿ ಬಾತ್’ ಕಾರ್ಯಕ್ರಮದ ನಾಲ್ಕನೇ ಸಂಚಿಕೆ. ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೊ ಮತ್ತು ದೂರದರ್ಶನ, ಆಲ್ ಇಂಡಿಯಾ ರೇಡಿಯೊ ಸುದ್ದಿ ವೆಬ್‌ಸೈಟ್ ಮತ್ತು ನ್ಯೂಸ್‌ಆನ್ ಏರ್ ಮೊಬೈಲ್ ಅಪ್ಲಿಕೇಶನ್‌ನ ಸಂಪೂರ್ಣ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.

ಕಳೆದ ಕೆಲವು ವಾರಗಳಿಂದ ದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವ ರೀತಿ, ನೀರು ಎಷ್ಟು ಮುಖ್ಯ ಎಂಬುದನ್ನು ನಮಗೆ ನೆನಪಿಸುತ್ತದೆ. ಝಾನ್ಸಿಯ ಕೆಲವು ಮಹಿಳೆಯರು ಘುರಾರಿ ನದಿಗೆ ಹೊಸ ಜೀವ ನೀಡಿದ್ದಾರೆ ಎಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಹೇಳಿದ್ದಾರೆ.

ಜಲ್ ಸಹೇಲಿ’ ಆಗುವ ಮೂಲಕ ಈ ಅಭಿಯಾನವನ್ನು ಮುನ್ನಡೆಸಿದ್ದಾರೆ. ಅಳಿವಿನಂಚಿನಲ್ಲಿದ್ದ ಘುರಾರಿ ನದಿಯನ್ನು ಈ ಮಹಿಳೆಯರು ರಕ್ಷಿಸಿದ ರೀತಿಯನ್ನು ಯಾರೂ ಊಹಿಸಿರಲಿಲ್ಲ. ಮಧ್ಯಪ್ರದೇಶದ ಛತ್ತರ್‌ಪುರದಲ್ಲಿಯೂ ಮಹಿಳೆಯರ ಪ್ರಯತ್ನ ಶ್ಲಾಘನೀಯ. ಇಲ್ಲಿನ ಖೊಂಪ್ ಗ್ರಾಮದ ದೊಡ್ಡ ಹೊಂಡ ಬತ್ತಲು ಆರಂಭಿಸಿದಾಗ ಮಹಿಳೆಯರು ಪುನಶ್ಚೇತನಕ್ಕೆ ಮುಂದಾಗಿದ್ದರು, ಎಂದರು.

Leave a Reply

Your email address will not be published. Required fields are marked *