Breaking
20 Sep 2026, Sun

ಧಮ೯ಸ್ಧಳ ಪ್ರಕರಣದಲ್ಲಿ ಜೈನ ಧರ್ಮದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಪೋಸ್ಟ್ : ಯುವಕ ಅರೆಸ್ಟ್

ಚಿಕ್ಕಮಗಳೂರು: ಜೈನ ಧರ್ಮದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಯುವಕನೊರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಧರ್ಮಸ್ಥಳ ಗ್ರಾಮದ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಪರ, ವಿರೋಧ ಪೋಸ್ಟ್ಗಳು ಹೆಚ್ಚಾಗಿದ್ದು, ಮಾತ್ರವಲ್ಲದೇ ಕೆಲವೊಂದು ಟ್ರೋಲ್ ಪೇಜ್ ಗಳು ಹುಟ್ಟಿಕೊಂಡಿವೆ. ಅದರಲ್ಲಿರುವ ಒಂದು ಪೋಸ್ಟ್ಗೆ ಆಗಸ್ಟ್ 2 ರಂದು ಅಜ್ಜಂಪುರ ತಾಲೂಕಿನ ಯುವಕ ಉಮೇಶ್ ಗೌಡ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ ಎನ್ನಲಾಗಿದೆ.

ಉಮೇಶ್ ಗೌಡನನ್ನು ಬಂಧಿಸಿದ ಪೊಲೀಸರು ನ್ಯಾಯಾಲಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ಕೋರ್ಟ್ ನ್ಯಾಯಾಂಗ ಬಂಧನ ಒಪ್ಪಿಸಿದೆ.

ಈ ಬಗ್ಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *