Breaking
29 Jun 2026, Mon

ಜೈ ತುಲುನಾಡ್ (ರಿ.) ಬಂಟ್ವಾಳ ಘಟಕದ ಉದ್ಘಾಟನಾ ಕಾರ್ಯಕ್ರಮ

ಬಂಟ್ವಾಳ : ತುಳು ಭಾಷೆ, ಲಿಪಿ, ಸಂಸ್ಕೃತಿ ಹಾಗೂ ಪರಂಪರೆಯ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ “ಜೈ ತುಲುನಾಡ್ (ರಿ.)” ಸಂಸ್ಥೆಯ ಬಂಟ್ವಾಳ ಘಟಕದ ಉದ್ಘಾಟನಾ ಕಾರ್ಯಕ್ರಮ ಆಗಸ್ಟ್ 17 ರಂದು ಭಾನುವಾರ ಬೆಳಿಗ್ಗೆ 10:30ಕ್ಕೆ ಬಿ‌.ಸಿ ರೋಡ್‌ನ ಡಾ|| ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ತುಲುನಾಡ್ (ರಿ.) ಕೇಂದ್ರ ಸಮಿತಿ ಅಧ್ಯಕ್ಷರು ಉದಯ್ ಪೂಂಜ ತಾರಿಪಾಡಿಗುತ್ತು ಅವರು ವಹಿಸಲಿದ್ದಾರೆ.

ಮುಖ್ಯ ಅಥಿತಿಗಳಾಗಿ ರಾಜೇಶ್ ಬಿ, ಸಹಾಯಕ ಇಂಜಿನಿಯರ್ ಮೆಸ್ಕಾಂ (ಪ್ರ) ಕುಲಶೇಖರ ಮಂಗಳೂರು, ಹಾಗೂ ಮಾಜಿ ಅಧ್ಯಕ್ಷರು ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು, ಕೆ. ಸತೀಶ್ ಅರಳ, ಅಧ್ಯಕ್ಷರು, ದ.ಕ. ಜಿಲ್ಲಾ ದಲಿತ ನಾಗರಿಕ ಹಿತರಕ್ಷಣಾ ಯುವ ವೇದಿಕೆ, ಬಂಟ್ವಾಳ, ನಾಗೇಶ್ ಪೂಜಾರಿ ನೈಬೇಲು, ಅಧ್ಯಕ್ಷರು, ಯುವವಾಹಿನಿ (ರಿ.) ಬಂಟ್ವಾಳ ಘಟಕ , ಮನೋಜ್ ಕುಮಾರ್ ಕಟ್ಟೆಮಾರ್, ಧರ್ಮದರ್ಶಿಗಳು, ಮಂತ್ರದೇವತಾ ಸಾನಿಧ್ಯ ಕಟ್ಟೆಮಾರ್, ಅಮ್ಟೂರು, ಮಾಧವ ವಿ ಎಸ್ ಕಡೇಶಿವಾಲಯ, ಉಪನ್ಯಾಸಕರು, ವಿಠಲ ಪದವಿ ಪೂರ್ವ ಕಾಲೇಜು, ವಿಟ್ಲ, ತ್ರಿಶೂಲ್ ಶೆಟ್ಟಿ, ಸಿನೆಮಾ ನಟ ಮತ್ತು ನಿರ್ದೇಶಕರು, ಐಶ್ವರ್ಯ ಆಚಾರ್ಯ, ಸಿನೆಮಾ ನಟಿ ಭಾಗವಹಿಸಲಿದ್ದಾರೆ.

ಬಂಟ್ವಾಳ ಘಟಕದ ಈ ಉದ್ಘಾಟನೆಯ ಮೂಲಕ ಸ್ಥಳೀಯ ಮಟ್ಟದಲ್ಲಿ ತುಳು ಭಾಷಾ, ಲಿಪಿ ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಹೆಚ್ಚಿನ ವೇಗ ನೀಡಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *