Breaking
30 Jun 2026, Tue

ಕುಂದಾಪುರ: ಡಿವೈನ್ ಸ್ಟಾರ್ ರಿಷಬ್‌ ಶೆಟ್ಟಿ ಅಭಿನಯಿಸಿ ನಿರ್ದೇಶನ ಮಾಡಿದ ಕಾಂತಾರ ಚಲನಚಿತ್ರಗಳಲ್ಲಿ ನಟ ರಿಷಬ್‌ ಶೆಟ್ಟಿ ಜೊತೆ ಕಾಣಿಸಿಕೊಂಡಿದ್ದ ಅಪ್ಪು ಎಂಬ ಕೋಣ ಕೊನೆಯುಸಿರೆಳೆದಿದ್ದು ಕಂಬಳ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಈ ಕೋಣವು ಕುಂದಾಪುರದಲ್ಲಿ ನಡೆಯುವ ಸಾಂಪ್ರಾದಾಯಿಕ ಕಂಬಳಗಳಲ್ಲಿ ನಿರಂತರ ಐದು ವರ್ಷ ಚಾಂಪಿಯನ್ ಪಟ್ಟಕ್ಕೇರಿದ್ದು, 2023ರಲ್ಲಿ ನಡೆದಿದ್ದ ಪ್ರಥಮ ವರ್ಷದ ಬೆಂಗಳೂರು ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ನಿಶಾನೆಗೆ ನೀರು ಹರಿಸಿ ಪ್ರಥಮ ಪ್ರಶಸ್ತಿಯನ್ನು ಗಳಿಸಿತ್ತು. ಬಂಟ್ವಾಳ, ಮೂಲ್ಕಿ ಮತ್ತು ಮಂಗಳೂರು ಕಂಬಳಗಳಲ್ಲಿ ಪ್ರಶಸ್ತಿ ಪಡೆದಿಕೊಂಡಿದೆ.

ಅಪ್ಪು ಕೋಣದ ನಿಧನದಿಂದಾಗಿ ಕಂಬಳ ಜಗತ್ತು ಒಬ್ಬ ಶ್ರೇಷ್ಠ ಚಾಂಪಿಯನ್‌ ಅನ್ನು ಕಳೆದುಕೊಂಡಂತಾಗಿದೆ.

ಅಪ್ಪು ಕೋಣದ ಅಂತ್ಯಕ್ರಿಯೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.

Leave a Reply

Your email address will not be published. Required fields are marked *