Breaking
9 Feb 2026, Mon

ಅಕ್ಟೋಬರ್ 26: ಮಾವಿನಕಟ್ಟೆಯಲ್ಲಿ ಯಕ್ಷ ಕದಂಭೋತ್ಸವ -2024

ಶ್ರೀ ಯಕ್ಷ ಕದಂಬ ಯಕ್ಷಗಾನ ಬಳಗ ಇವರಿಂದ ಕದಂಬ ವನವಾಸಿನಿ ಯಕ್ಷಗಾನ ಬಯಲಾಟ ನಡೆಯಲಿದೆ

ಬಂಟ್ವಾಳ: ಶ್ರೀ ಯಕ್ಷ ಕದಂಬ ಯಕ್ಷಗಾನ ಬಳಗ ಮಾವಿನಕಟ್ಟೆ ವಾಮದಪದವು ಇದರ ಪ್ರಥಮ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷ ಕದಂಭೋತ್ಸವ 2024 ಕಾರ್ಯಕ್ರಮ ಅಕ್ಟೋಬರ್ 26, ಶನಿವಾರದಂದು ಮಾವಿನಕಟ್ಟೆ ಮೈದಾನ ( ಶ್ರೀದುರ್ಗಾ ವೆಲ್ಡಿಂಗ್ ಶಾಪ್ ಬಳಿ ನಡೆಯಲಿದೆ.

ಸಂಜೆ 5 ರಿಂದ ಕುಕ್ಕಿಪಾಡಿ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಮತ್ತು ಚಾಮುಂಡೇಶ್ವರಿ ಭಜನಾ ಮಂಡಳಿ ಮಾವಿನಕಟ್ಟೆ ಇವರಿಂದ ಕುಣಿತಾ ಭಜನೆ, ಸಂಜೆ 6ರಿಂದ ಸಭಾ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ, ಗುರುವಂದನಾ ಕಾರ್ಯಕ್ರಮ, ಸಂಜೆ 7:30ರಿಂದ ಶ್ರೀ ಯಕ್ಷ ಕದಂಬ ಯಕ್ಷಗಾನ ಬಳಗ ಇವರಿಂದ `ಕದಂಬ ವನವಾಸಿನಿ ‘ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಬಳಗದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *