Breaking
23 Mar 2026, Mon

ವಿಷಪೂರಿತ ಹಾವು ಕಚ್ಚಿ ಬಾಲಕಿ ಸಾವು

ಕುಂದಾಪುರ: ವಿಷಪೂರಿತ ಹಾವು ಕಚ್ಚಿ ಓರ್ವ ಬಾಲಕಿ ಮೃತಪಟ್ಟಿರುವ ಘಟನೆ ಆ.03 ರಂದು ನಡೆದಿದೆ.

ಮೃತಪಟ್ಟ ಬಾಲಕಿ ಶೇಡಿಮನೆಯ ಬೆಪ್ಪರೆ ಗುಡ್ಡೆಯಂಗಡಿ ನಿವಾಸಿ ಶ್ರೀಧರ್ ಮಡಿವಾಳ ಅವರ ಪುತ್ರಿ ಸನ್ನಿಧಿ (ವ.8) ಎಂದು ಗುರುತಿಸಲಾಗಿದೆ. ಮಂಡಿ ಮೂರುಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ.

ಸನ್ನಿಧಿ ತಂದೆಯನ್ನು ಹುಡುಕಲು ತೋಟಕ್ಕೆ ತೆರಳಿದ್ದಸಂದರ್ಭದಲ್ಲಿ ತೋಟದಲ್ಲಿ ವಿಷಪೂರಿತ ಹಾವು ಕಚ್ಚಿದ್ದು , ತೀವ್ರ ನೋವಿನಿಂದ ಕಿರುಚುತ್ತಾ ಮನೆಗೆ ಓಡಿ ಬಂದಳು. ತಕ್ಷಣವೇ ಆಕೆಯನ್ನು ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ನಂತರಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಶ್ರೀಧರ್ ಮಡಿವಾಳ ನೀಡಿದ ದೂರಿನ ಆಧಾರದಲ್ಲಿ ಅಮಸ್‌ಬೈಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *