Breaking
21 Mar 2026, Sat

ಮಂಚಕಲ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ಸಹಿತ ಲೇಖನಿ ಸಾಮಾಗ್ರಿ ವಿತರಣೆ

ಬಂಟ್ವಾಳ : ತಾಲೂಕಿನ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಜುಲೈ 30 ರಂದು ಉಚಿತ ಪುಸ್ತಕ ಮತ್ತು ಲೇಖನಿ ಸಾಮಾಗ್ರಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತಾನಾಡಿದ ಲೋರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫೆನಾರ್ಂಡಿಸ್ ಅವರು ಗ್ರಾಮೀಣ ಮತ್ತು ನಗರದ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಕೆಲವೊಂದು ಮೂಲಭೂತ ಸೌಕರ್ಯದ ಕೊರತೆ ಮಾತ್ರ ಇದೆ. ಈ ಸಮಸ್ಯೆ ನಿವಾರಿಸಲು ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶೈಲಜಾ ಗಣೇಶ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ನ ಸದಸ್ಯರಾದ ಸೆಬೆಸ್ಟಿನ್ ಮಿನೇಜಸ್, ರಾಜೇಶ್ ಶೆಟ್ಟಿ ಕೊನೆರೊಟ್ಟು, ಶಶಿಧರ ಶೆಟ್ಟಿ ಕಲ್ಲಾಪು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಭವಾನಿ ಮಹೇಶ್, ಪವಿತ್ರ ಜೈನ್, ಅಂಗನವಾಡಿ ಕಾರ್ಯಕರ್ತೆ ಹೇಮಲತಾ ಶೆಟ್ಟಿಗಾರ್, ಪ್ರಮುಖರಾದ ಸುರೇಶ್ ಸಾಲ್ಯಾನ್, ಸುಮಲತಾ, ಜಯಶ್ರೀ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ವಿನಿತಾ ಅರ್ಕುಳ ಸ್ವಾಗತಿಸಿ, ಕ್ಲಬ್ಬಿನ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ ವಂದಿಸಿದರು.

Leave a Reply

Your email address will not be published. Required fields are marked *