ಬಂಟ್ವಾಳ: ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ಸಜೀಪ ಮೂಡ ಇಲ್ಲಿ ನಾಗರಪಂಚಮಿಯ ಅಂಗವಾಗಿ ಶ್ರೀ ಕ್ಷೇತ್ರದ ನಾಗದೇವರಿಗೆ ಫಲಪಂಚಾಮೃತ ಅಭಿಷೇಕ ನಾಗತಂಬಿಲ ನಡೆಯಿತು.

ಈ ಧಾರ್ಮಿಕ ವಿಧಿವಿಧಾನಗಳನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೆರವೇರಿಸಿದರು.
ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಶ್ರೀ ನಾಗ ದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಿದರು.



