ತುಳಸಿವಳ್ಳಿ ಸಭಾಭವನದಲ್ಲಿ 9 ದಿನಗಳ “ವಿಶ್ವ ಭಾರತಿ ಯಕ್ಷ ಸಂಭ್ರಮ ಭಾರತದರ್ಶನ” ಸಮಾರೋಪ ಸಮಾರಂಭ

ಬಂಟ್ವಾಳ: ವಿಶ್ವ ಭಾರತಿ ಯಕ್ಷ ಸಂಜೀವಿನಿ ರಿಜಿಸ್ಟರ್ಡ್ ಮುಡಿಪು ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ಇವುಗಳ ಸಂಯುಕ್ತ ಆಶಯದಲ್ಲಿ ತುಳಸಿವಳ್ಳಿ ಸಭಾಭವನದಲ್ಲಿ 9 ದಿನಗಳ “ವಿಶ್ವ ಭಾರತಿ ಯಕ್ಷ ಸಂಭ್ರಮ ಭಾರತದರ್ಶನ” ಸಮಾರೋಪ ಸಮಾರಂಭವು ಭಾನುವಾರ (ಜು.27) ನಡೆಯಿತು.

ಈ 9 ದಿನಗಳಲ್ಲಿ ವಿವಿಧ ಸಂಸ್ಥೆಗಳ ಹಾಗೂ ಪ್ರಸಿದ್ಧ ಅತಿಥಿ ಕಲಾವಿದರ ನೇತೃತ್ವದಲ್ಲಿ ಸರಣಿ ಯಕ್ಷಗಾನ ತಾಳಮದ್ದಳೆಯು ಕರ್ನಾಟಕ ಸರ್ಕಾರ ಮಾಜಿ ಸಚಿವ ಬಿ ರಮಾನಾಥ ರೈ ಅಧ್ಯಕ್ಷತೆಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಕೀನ್ಯಾ ಕೃಷ್ಣಪ್ಪ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ , ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ವೈದ್ಯರಾದ ಡಾ ಶಿವಪ್ರಸಾದ್ ಶೆಟ್ಟಿ, ತುಳಸಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಅಧ್ಯಕ್ಷ ರಾಜ ರಾಮ ಭಟ್, ವಿಶ್ವ ಭಾರತಿ ಸಂಚಾಲಕ ಕಾರ್ಯಕ್ರಮದ ರೂವಾರಿ ಪ್ರಶಾಂತ್ ಕುಮಾರ್ ಹೊಳ್ಳ , ಯಕ್ಷಗಾನ ಸಂಘಟಕ ಧರ್ಮಸ್ಥಳ ಭುಜಬಲಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದಿವಂಗತ ಕುಬಣ್ಣೂರು ಶ್ರೀಧರರಾವ್ ಸ್ಮರಣಾ ಕಾರ್ಯಕ್ರಮವನ್ನು ಖ್ಯಾತ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಅರ್ಥಗರ್ಭಿತವಾಗಿ ನಡೆಸಿಕೊಟ್ಟರು.

ಸಮಾರೋಪದ ಅಂಗವಾಗಿ ಗದಾಯುದ್ಧ ಯಕ್ಷಗಾನ ತಾಳಮದ್ದಳೆ ಪ್ರಸಿದ್ಧ ಕಲಾವಿದರ ಸಹಭಾಗಿತ್ವದಲ್ಲಿ ನಡೆಯಿತು.

Leave a Reply

Your email address will not be published. Required fields are marked *