ಸಿದ್ದಕಟ್ಟೆ : ಪ್ರತಿಯೊಬ್ಬ ವ್ಯಕ್ತಿಯು ತನಗೆ ಸಮಾಜದಲ್ಲಿ ದೊರೆತ ಜವಾಬ್ದಾರಿ ಮತ್ತು ಸೇವೆಯನ್ನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ವ್ಯಕ್ತಿ ನಿಷ್ಠೆ ಹೊಂದಿದಾಗ ಸಮಾಜದಲ್ಲಿ ಜಾನಾನುರಾಗಿಯಾಗಲು ಸಾಧ್ಯ . ಈ ನಿಟ್ಟಿನಲ್ಲಿ ವೈದ್ಯ ವೃತ್ತಿಯಲ್ಲಿ ನಿವೃತ್ತಿ ಎಂಬುದು ಸರಕಾರಿ ದಾಖಲೆಗಳಲ್ಲಿ ಮಾತ್ರ ಹೊರತು ವಾಸ್ತವದಲ್ಲಿ ನಿತ್ಯ ನಿರಂತರ ಸೇವೆಯೊಂದಿಗೆ ಸಂತಸ ಕಾಣುವ ವೃತ್ತಿ ವೈದ್ಯ ವೃತ್ತಿಯಾಗಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .

ಅವರು ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ನಿವೃತ್ತ ಜಾನುವಾರು ಅಭಿವೃದ್ದಿ ಅಧಿಕಾರಿ ಡಾ .ಶ್ರೀಧರ ಶೆಟ್ಟಿಯವರಿಗೆ ಗೌರವರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ , ನಿರ್ದೇಶಕರಾದ ರಶ್ಮಿತ್ ಶೆಟ್ಟಿ ಮತ್ತು ದಿನೇಶ್ ಪೂಜಾರಿ ಮಾತಾನಾಡಿ ಶುಭ ಹಾರೈಸಿದರು .

ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಸತೀಶ್ ಪೂಜಾರಿ ಅಲಕ್ಕೆ , ಚಂದ್ರಶೇಖರ ಶೆಟ್ಟಿ , ವಿಶ್ವನಾಥ ಶೆಟ್ಟಿಗಾರ್ , ಮಂದಾರತಿ ಎಸ್ ಶೆಟ್ಟಿ , ಪುಷ್ಪಲತಾ ಎಸ್ ಆರ್ , ವೀರಪ್ಪ ಪರವ ,ಜಾರಪ್ಪ ನಾಯ್ಕ , ಎ ಶಿವ ಗೌಡ , ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಹಾಗೂ ಪತ್ರಿಕಾ ವರದಿಗಾರ ರಾಜ ಬಂಟ್ವಾಳ ಉಪಸ್ಥಿತರಿದ್ದರು .
ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು .


