ಬಂಟ್ವಾಳ: ಲಯನ್ಸ್ ಕ್ಲಬ್ ಮಾಣಿ ಇದರ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಜನಾರ್ದನ ಪೆರಾಜೆ ಆಯ್ಕೆಯಾಗಿದ್ದು ಜು.22 ರ ಸಂಜೆ ಪದ್ಮ ಮಿನಿ ಹಾಲ್ ಮಾಣಿಯಲ್ಲಿ ಪದಗ್ರಹಣ ಸಮಾರಂಭ ಜರಗಲಿದೆ ಎಂದು ಸ್ಥಾಪಕ ಅಧ್ಯಕ್ಷ ಗಂಗಾಧರ ರೈ ಮಾಣಿ ತಿಳಿಸಿದ್ಧಾರೆ.

ಕಾರ್ಯದರ್ಶಿಯಾಗಿ ರತ್ನಾಕರ ರೈ ಮಾಣಿ, ಕೋಶಾಧಿಕಾರಿಯಾಗಿ ರಾಜೇಶ್ ಶೆಟ್ಟಿ ಉಪಾಧ್ಯಕ್ಷರಾಗಿ ವಿನ್ಸೆಂಟ್ ಲಸ್ರಾದೋ, ಜೊತೆ ಕಾರ್ಯದರ್ಶಿಯಾಗಿ ಮಾರ್ಸೆಲ್ ಪಾಯಸ್ , ರೊನಾಲ್ಡ್ ಮೊನಿಸ್ ಆಯ್ಕೆ ಮಾಡಲಾಗಿದ್ದು ಲಯನ್ಸ್ ಜಿಲ್ಲಾ ಮುಖ್ಯ ಸಂಯೋಜಕ ಪಿ.ವಿ.ಅನಿಲ್ ಕುಮಾರ್ ಪದಗ್ರಹಣ ನೆರವೇರಿಸಲಿದ್ದಾರೆ.

ಸೇವಾಧ್ಯಕ್ಷರಾಗಿ ಡಾ. ಮನೋಹರ ರೈ , ವಿವಿಧ ಪದಾಧಿಕಾರಿಗಳಾಗಿ ಕೂಸಪ್ಪ ಪೂಜಾರಿ, ಉಮೇಶ್ ಪಿ, ರವಿಕಿಶನ್ ಶೆಟ್ಟಿ, ಗಣೇಶ್ ಪೂಜಾರಿ, ಕೆ.ಎನ್ ಗಂಗಾಧರ ಆಳ್ವ , ಡಾ. ಶ್ರೀನಾಥ್ ಆಳ್ವ ,ವಿನ್ಸೆಂಟ್ ಪಾಯಸ್ ಡಾ. ಜಗದೀಶ್ ಭಟ್ ಆಯ್ಕೆಯಾಗಿದ್ದಾರೆ ಮತ್ತು ನಿರ್ದೇಶಕರು ಮತ್ತು ಸಲಹಾ ಸಮಿತಿ ಸದಸ್ಯರನ್ನು ನೇಮಿಸಲಾಗಿದೆ ಎಂದು ನಿಕಟಪೂರ್ವ ಅಧ್ಯಕ್ಷರಾಗಿ ರಾಮಕಿಶನ್ ರೈ ಅನಂತಾಡಿ ತಿಳಿಸಿದ್ದಾರೆ.



