ದೇಶದಲ್ಲಿ ಈ ಹಿಂದೆ ಪೊಲಿಯೊ ನಿರ್ಮೂಲನೆ ಗೊಳಿಸುವಲ್ಲಿ ಯಶಸ್ವಿಯಾಗಿದ್ದ ಅಂತರ್ ರಾಷ್ಟ್ರೀಯ ರೋಟರಿ ಸಂಸ್ಥೆಯು ಪ್ರಸಕ್ತ ‘ಗರ್ಭಕಂಠದ ಕ್ಯಾನ್ಸರ್’ ತಡೆಗಟ್ಟಲು ಜನ ಜಾಗೃತಿ ಮೂಡಿಸುತ್ತಿದೆ. ರೋಟರಿ ಸಹಭಾಗಿತ್ವದಲ್ಲಿ ಮಿತ ದರದ ಲಸಿಕೆ ವಿತರಣೆಗೆ ಪ್ರಯತ್ನ ನಡೆದಿದ್ದು, ಈ ಲಸಿಕೆ ಬಳಕೆಯಿಂದ ಮರಣ ಪ್ರಮಾಣ ಇಳಿಕೆಗೆ ಸಹಕಾರಿಯಾಗಲಿದೆ ಎಂದು ರೋಟರಿ ಸಹಾಯಕ ಗವರ್ನರ್, ಮಕ್ಕಳ ತಜ್ಞ ಡಾ.ಮುರಳಿಕೃಷ್ಣ ಹೇಳಿದರು.
ಕ್ಲಬ್ಬಿನ ಅಧ್ಯಕ್ಷ, ವಕೀಲ ಸುರೇಶ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಟರಿ ಕ್ಲಬ್ ಜನಪರ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಲ್ಲಿ ಮುಂಚೂಣಿಯಲ್ಲಿದೆ ಎಂದರು.
ಪ್ರಸೂತಿ ತಜ್ಞೆ ಡಾ.ರಶ್ಮಿ ಮುರಳಿಕೃಷ್ಣ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ‘ಗರ್ಭಕಂಠ ಕ್ಯಾನ್ಸರ್’ ಬಾರದಂತೆ ತಡೆಯಲು ಸಾಧ್ಯವಿದೆ ಎಂದರು.
ಶಾಲಾಭಿವೃದ್ಧಿ ಅಮಿತಿ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಸದಸ್ಯರಾದ ವಸಂತ ಕುಮಾರ್ ಅಣ್ಣಳಿಕೆ, ರಾಜೇಶ ಜೈನ್ ಪಡ್ರಾಯಿ, ಕ್ಲಬ್ಬಿನ ಮಾಜಿ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್, ಸದಸ್ಯರಾದ ವಿಜಯ ಫೆರ್ನಾಂಡೀಸ್ , ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ರೂಪಾ ರಾಜೇಶ ಶೆಟ್ಟಿ, ಸುಜನ್ ವಾಸ್, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ, ಪ್ರದೀಪ್ ಪೂಜಾರಿ ಸಿದ್ಧಕಟ್ಟೆ ಮತ್ತಿತರರು ಇದ್ದರು.
ಮುಖ್ಯ ಶಿಕ್ಷಕಿ ಸೌಮ್ಯಾ ಸ್ವಾಗತಿಸಿ, ಕ್ಲಬ್ಬಿನ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಸೀತಾಳ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಕೆ.ರಮೇಶ ನಾಯಕ್ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಕ್ಲಬ್ಬಿನ ಮಾಜಿ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಕೊಡುಗೆ ನೀಡಿದ ಹಣ್ಣಿನ ಸಸಿ ನಾಟಿ ಮಾಡಲಾಯಿತು.