ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ವಿಶ್ವ ಹಿಂದು ಪರಿಷತ್ತಿನ ರಾಜ್ಯ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರಿಗೆ ಬಿಸಿ ರೋಡಿಗೆ ಬನ್ನಿ ಎಂದು ಆಡಿಯೋ ಸಂದೇಶ ಹಾಕಿದ ವಿಚಾರದ ನಂತರ ನಡೆದ ಬೆಳವಣಿಗೆಯಲ್ಲಿ ಸೋಮವಾರ ಬೆಳಗ್ಗೆ ಹಿಂದೂ ಸಂಘಟನೆಗಳು ಬಿಸಿ ರೋಡ್ ಚಲೋಗೆ ಕರೆ ನೀಡಿದ್ದರು. ಇದರಲ್ಲಿ ಸ್ವತ: ಶರಣ್ ಪಂಪ್‌ವೆಲ್ ಅವರೇ ಬಿಸಿ ರೋಡಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರಣ್ ಪಂಪ್‌ವೆಲ್, ಇವರ ಸವಾಲು ನಮಗೆ ಹೊಸದಲ್ಲ. ಆದರೆ ಮೊನ್ನ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ಹೋಗುವ ಸಂದರ್ಭ ಅಲ್ಲಿ ಕಲ್ಲು ತೂರಾಟ ಮಾಡಿದ್ದಾರೆ, ಪೆಟ್ರೋಲ್ ಬಾಂಬ್ ಎಸೆದಿದ್ದಾರೆ, ಚಪ್ಪಲಿ ಹಾರ ಹಾಕಿದ್ದಾರೆ, ಅಷ್ಟೇ ಅಲ್ಲದೆ ಗಣೇಶನ ಭಕ್ತರ ಮೇಲೆಹಲ್ಲೆ ಮಾಡಿದ್ದಾರೆ. ಇದನ್ನು ವಿರೋಧಿಸಿದ್ದು ತಪ್ಪಾ? ನಾವು ಪ್ರತಿಭಟನೆ ಮಾಡುವ ವೇಳೆ ಒಂದು ಮಾತು ಹೇಳಿದೆ. ಗಣೇಶೋತ್ಸವವನ್ನು ಎಲ್ಲರೂ ಸುಖ, ಶಾಂತಿ, ನೆಮ್ಮದಿಯಿಂದ ಬದುಕಲಿ ಎಂಬುದು ಕಲ್ಪನೆ. ನಾವು ಯಾವುತ್ತೂ ಗಣೇಶೋತ್ಸವ ಮುಖಾಂತರ ಇನ್ನೊಬ್ಬರಿಗೆ ತೊಂದರೆ ಕೊಟ್ಟಿಲ್ಲ. ಆದರೆ ನಾವು ಮಾಡುವ ಗಣೇಶೋತ್ಸವಕ್ಕೆ ನೀವು ತೊಂದರೆ ಕೊಟ್ರಿ. ಒಮದು ವೇಳೆ ನಿಮ್ಮದೇ ಕಾರ್ಯಕ್ರಮ ರಸ್ತೆಯಲ್ಲಿ ಹೋಗುವಾಗ ಹಿಂದು ಸಮಾಜ ನಿಲ್ಲಿಸಿದರೆ