Breaking
20 Sep 2026, Sun

ರಕ್ತದ ಕಾನ್ಸರ್‌ಗೆ ತುತ್ತಾದ ಮಗುವಿಗೆ ಯುವವಾಹಿನಿ ಬಂಟ್ವಾಳದ ವತಿಯಿಂದ ತುರ್ತು ಆರೋಗ್ಯ ನಿಧಿ ಹಸ್ತಾಂತರ

ಬಂಟ್ವಾಳ : ರಕ್ತದ ಕಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿಯಾದ ಹಿರಣ್ಯಾಕ್ಷ ಸೌಮ್ಯ ದಂಪತಿಗಳ ಮಗಳಾದ ಮನಶ್ವಿ (5 ವರ್ಷ) ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಯುವವಾಹಿನಿ ಬಂಟ್ವಾಳ ಘಟಕವು ₹25,000/- ತುರ್ತು ಆರೋಗ್ಯ ನಿಧಿ ಹಸ್ತಾಂತರ ಮಾಡಿದೆ.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು, ಕಾರ್ಯದರ್ಶಿ ಮಧುಸೂದನ್ ಮದ್ವ, ಕೋಶಾಧಿಕಾರಿ ನವೀನ್ ಪೂಜಾರಿ, ಉಪಾಧ್ಯಕ್ಷ ಕಿರಣ್‌ರಾಜ್ ಪೂಂಜರೆಕೋಡಿ, ನಿಕೇಶ್ ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಭುವನೇಶ್ ಪಚ್ಚಿನಡ್ಕ, ಮಾಜಿ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *